ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮ

Suddi Udaya

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು ಇವರ ವತಿಯಿಂದ ಗ್ರಾಮದ ಬಿಲ್ಲವ ಸಮಾಜ ಬಾಂಧವರ ಸಮಾಗಮ ಮತ್ತು ಮನರಂಜನೆಗಾಗಿ ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮವು ಸುಲ್ಕೇರಿಮೊಗ್ರು ನಡಾಯಿ ಬಳಿ ದಯಾನಂದರ ಗದ್ದೆಯಲ್ಲಿ ಸೆ.29ರಂದು ವಿಜೃಂಭಣೆಯಿಂದ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಸಂಕೇತ್ ಬಂಗೇರ ವಹಿಸಿದ್ದರು. ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ವೇದಿಕೆಯಲ್ಲಿ ಸುಧೀರ್ ಸುವರ್ಣ, ದಿಶಾಂತ್ ಕುಮಾರ್, ಸ್ವರಾಜ್ ಬಂಗೇರ, ಸಂದೀಪ್ ಪಟ್ಲ, ಕುಮಾರ್‌ಚಂದ್ರ, ದಯಾನಂದ ಪೂಜಾರಿ, ಶಾಲಿನಿ ಕೇಶವ ಬಂಗೇರ, ಶ್ರೀಮತಿ ಶಾಂತಿಕಿರಣ್, ರವಿ ಪೂಜಾರಿ, ಶಿವಪ್ಪ ಪೂಜಾರಿ, ಅಶೋಕ್ ಸುವರ್ಣ , ಶ್ರೀಮತಿ ಮಲ್ಲಿಕಾ, ವೆಂಕಪ್ಪ ಪೂಜಾರಿ, ಸದಾನಂದ, ಪೂಜಾರಿ ಶ್ರೀಮತಿ ಲಲಿತ ಆನಂದ ಪೂಜಾರಿ, ಶ್ರೀಮತಿ ರೇವತಿ, ಪ್ರಕಾಶ್ ಕೊಲ್ಲಂಗೆ, ಅಶ್ವತ್ ವರ್ಪಾಳೆ, ಪುರುಷೋತ್ತಮ, ಗಣೇಶ್ ಕಾಡಂಗೆ ಉಪಸ್ಥಿತರಿದ್ದರು.

ನಂದನ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ವಿಜಯಕುಮಾರ್ ದನ್ಯವಾದವಿತ್ತರು.

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿ ಸ್ಪರ್ಧಾರ್ಥಿಗಳು ಹಾಗೂ ಗಂಗಾಧರ ಮಿತ್ತಮಾರು ಇವರೊಂದಿಗೆ ಕೆಸರುಗದ್ದೆಗೆ ಇಳಿದು ಹುಲಿ ಕುಣಿತ ಮಾಡಿ ಸ್ಪರ್ದಾರ್ಥಿಗಳನ್ನು ಹುರುದುಂಬಿಸಿದರು.

ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಗ್ಗ ಜಗ್ಗಾಟ, ವಾಲಿಬಾಲ್, ಅಪಂಗಾಯಿ ಓಟ, ತಿರುಗಿ ಓಡುವುದು. 200 ಮೀಟರ್ ಓಟ, ಕಬಡ್ಡಿ, ಹಿಂದೆ ನಡೆಯುವುದು,ಹಾಳೆ ಎಳೆಯುವುದು, ಮೂರು ಜನರ ಟೊಂಕ ಮೊದಲಾದ ಗ್ರಾಮೀಣ ಸ್ಫರ್ದೆಗಳನ್ನು ಆಯೋಜಿಸಲಾಗಿತ್ತು. ಸರ್ವದರ್ಮದ ಬಂಧುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿದರು.

ನಿತೀಶ್ ರೆಪ್ರಿಯಾಗಿ ಹಾಗೂ ರಾಮ್‌ಪ್ರಸಾದ್ ಮಾರ್ನಾಡ್ ಕೆಸರಗದ್ದೆ ಸ್ಪರ್ದೆಯನ್ನು ಯಶಸ್ವಿಯಾಗಿ ನಿರೂಪಣೆಯನ್ನು ಮಾಡಿದರು

Leave a Comment

error: Content is protected !!