24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಎಸ್‌ಡಿಪಿಐ ವತಿಯಿಂದ ಪೆರಾಲ್ದರಕಟ್ಟೆಯಲ್ಲಿ ಕಂಡಡ್ ಒಂಜಿದಿನ ಕ್ರೀಡಾಕೂಟ.

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೆಂಕಕಾರಂದೂರು ಬ್ರಾಂಚ್ ಸಮಿತಿ ವತಿಯಿಂದ ಕಂಡಡ್ ಒಂಜಿದಿನ ಕ್ರೀಡಾಕೂಟ ಪೆರಾಲ್ದರಕಟ್ಟೆಯಲ್ಲಿ ಸೆ.29ರಂದು ನಡೆಯಿತು.

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಬ್ರಾಂಚ್ ಅಧ್ಯಕ್ಷ ನವಾಝ್ ಮಂಜೊಟ್ಟಿ ವಹಿಸಿದ್ದರು. ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು.

ವಿಭಿನ್ನವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ತೆಂಕಕಾರಂದೂರು ಗ್ರಾಮದ ನಾಗರಿಕರಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.

ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ನವಾಝ್ ಕಟ್ಟೆ ಅವರು ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮದ ಅಗತ್ಯತೆಯನ್ನು ಮನವರಿಕೆ ಮಾಡಿದರು. ಗ್ರಾಮೀಣ ಭಾಗದ ಎಲ್ಲಾ ಯುವಕರು ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಕರೆ ನೀಡಿದರು.

ಊರಿನ ಹಿರಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪುರುಷರು, ಮಕ್ಕಳಿಗೆ ಲಿಂಬೆ ಚಮಚ ಓಟ, ಒಂಟಿ ಕಾಲಿನ ಓಟ, ಹಾಳೆ ಓಟ, ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಈ ಮೊದಲಾದ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಿರಿಯರು, ಕಿರಿಯರು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು. ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ರಫೀಕ್ ಜಿ. ಎ, ಕಾಸಿಂ ಕಟ್ಟೆ, ಹನೀಫ್ ಪುಂಜಾಲಕಟ್ಟೆ, ಅಬೂಬಕ್ಕರ್ ಮಂಜೊಟ್ಟಿ, ಅಶ್ಫಾಕ್ ಪುಂಜಾಲಕಟ್ಟೆ, ಮುಸ್ತಾಫ ಜಿ. ಕೆರೆ, ಕಮರುದ್ದಿನ್, ರಫೀಕ್ ಕನ್ನಡಿಕಟ್ಟೆ, ರಮೇಶ್ ಗಿಂಡಾಡಿ, ಅಶ್ರಫ್ ಬದ್ಯಾರು, ಶಮೀಮ್ ಕಟ್ಟೆ, ಪದ್ಮನಾಭ ಶೆಟ್ಟಿ, ರಾಮನಂದ ಪೂಜಾರಿ, ಅಶ್ರಫ್ ಕಟ್ಟೆ ಬ್ರಾಂಚ್ ಸಮಿತಿ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿಜಾಮ್ ಕಟ್ಟೆ ನಿರೂಪಿಸಿದರು.

Related posts

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ: ಹೊರೆಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ, ಧ್ವಜಾರೋಹಣ

Suddi Udaya

ಕೊಕ್ಕಡ: ಸ್ವಚ್ಛತೆಯೇ ಸೇವೆ, ಶ್ರಮದಾನ, ಸಾಧಕರಿಗೆ ಸನ್ಮಾನ

Suddi Udaya

ಬ್ರೈಟ್ ಇಂಡಿಯಾ, ಮದ್ದಡ್ಕ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆಗಳ ವಿತರಣೆ

Suddi Udaya

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya

ಕೂಕ್ರಬೆಟ್ಟು ಶಾಲೆಯಲ್ಲಿ ನಾರಾವಿ ವಲಯ ಮಟ್ಟದ ವಾಲಿಬಾಲ್‌ ಪಂದ್ಯಾಟ: ಸಾವ್ಯ, ಅಂಡಿಂಜೆ ಶಾಲಾ ಮಕ್ಕಳು ಪ್ರಥಮ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!