ಅ.6: ಬಳಂಜದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಶಾರದೋತ್ಸವ

Suddi Udaya

ಬಳಂಜ: ಕಳೆದ ನಾಲ್ಕೂವರೆ ದಶಕಗಳ ಭವ್ಯ ಪರಂಪರೆಯಿರುವ ಬಳಂಜ‌ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯು ವಿನೂತನ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದ ಸಂಘಟನೆಯಾಗಿದೆ.ಸಂಘದ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದೊಂದಿಗೆ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.6 ರಂದು ವಿವಿಧ, ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮಗಳೊಂದಿಗೆ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ನೆರವೇರಿಸಲಿದ್ದು, ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಬಳಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಶ್ರೀ ಕ್ಲಿನಿಕ್ ನ ಪ್ರಸಿದ್ದ ವೈದ್ಯರಾದ ಡಾ. ಎನ್.ಎಂ ತುಳಪುಳೆ ಅಳದಂಗಡಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಬಂಟ್ವಾಳ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಬಳಂಜ ಗ್ರಾ.ಪಂ. ಅಧ್ಯಕ್ಷೆ ಶೋಭಾ ಕುಲಾಲ್, ಉದ್ಯಮಿ ಹರೀಶ್ ಶೆಟ್ಟಿ ಕಂರ್ಬಿತ್ತಿಲ್, ಸಮಾಜ ಸೇವಕ ರವಿ ಕಕ್ಕೆಪದವು, ಗುಜರಾತ್ ಉದ್ಯಮಿ ಶೇಖರ್ ದೇವಾಡಿಗ ಭಾಗವಹಿಸಲಿದ್ದಾರೆ‌ ಹಾಗೂ ಬೆಳಿಗ್ಗೆ ಗಂಟೆ 8.30 ರಿಂದ ಮಕ್ಕಳಿಗೆ,ಮಹಿಳೆಯರಿಗೆ,ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದರು

ವಿಶೇಷ ಆಕರ್ಷಣೆ: ಹರೀಶ್ ವೈ ಚಂದ್ರಮ ಮತ್ತು ಸಂದೇಶ್ ಇವರ ಸಹಕಾರದೊಂದಿಗೆ ಜಿಲ್ಲೆಯ ಪ್ರಸಿದ್ದ ಭಜನಾ ತಂಡಗಳ 500 ಕ್ಕೂ ಹೆಚ್ಚಿನ ಭಜಕರಿಂದ ಕುಣಿತಾ ಭಜನೆ,ಆಕರ್ಷಕ ಸುಡುಮದ್ದು ಪ್ರದರ್ಶನ,ಶ್ರೀಮಾತ ನಾಲ್ಕೂರು ತಂಡದ ನೇತೃತ್ವದಲ್ಲಿ ಡಿಜೆ ನೈಟ್, ಕರಾವಳಿಯ ಪ್ರಸಿದ್ದ ಕಲಾವಿದರಿಂದ ನಾಸಿಕ್ ಬ್ಯಾಂಡ್ ಪ್ರದರ್ಶನ,ಊರ ಕಲಾಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ,ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಪಿಲಿ ನಲಿಕೆ,ಗೊಂಬೆ ಕುಣಿತಾ,ಟ್ಯಾಬ್ಲೊ,

ಕಾರ್ಯಕ್ರಮಗಳು: ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು,ನಂತರ ಬಳಂಜ ಪಂಚಶ್ರೀ ಮಹಿಳಾ ಭಜನಾ ಮಂಡಳಿ ಹಾಗೂ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 9.30ಕ್ಕೆ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 1.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 5.00ಕ್ಕೆ ಮಹಾಪೂಜೆ, ಮಂಗಳಾರತಿ, ಸಂಜೆ 5.30ರಿಂದ ದೇವರ ಭವ್ಯ ಶೋಭಾಯಾತ್ರೆಯು ವಿವಿಧ ವೇಷ ಭೂಷಣಗಳೊಂದಿಗೆ ಸುಡುಮದ್ದು ಪ್ರದರ್ಶನ, ಭಜನೆ, ಕಲಾತಂಡಗಳ ಸಹಿತ ಕಾಪಿನಡ್ಕ ಪಲ್ಗುಣಿ ನದಿಯಲ್ಲಿ ಶಾರದಾ ದೇವಿಯ ಮೂರ್ತಿ ವಿಸರ್ಜನೆ ನಡೆಯಲಿದೆ


ಪುರುಷರಿಗೆ ವಲಯ ಮಟ್ಟದ 510 ಕೆ.ಜಿ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆ: ಶಾರದೋತ್ಸವದ ಪ್ರಯುಕ್ತ ಪುರುಷರಿಗೆ ವಲಯ ಮಟ್ಟದ 510+5 ಕೆ.ಜಿ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ.ಸ್ಪರ್ದೆಯಲ್ಲಿ ಬಳಂಜ,ಅಳದಂಗಡಿ,ಶಿರ್ಲಾಲು, ಪಡಂಗಡಿ ಗ್ರಾ.ಪಂ ವ್ಯಾಪ್ತಿಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರಥಮ ರೂ 3000 ಮತ್ತು ಟ್ರೋಪಿ,ದ್ವೀತಿಯ ರೂ.2000 ಮತ್ತು ಟ್ರೋಪಿ,ಪ್ರವೇಶ ಶುಲ್ಕ ರೂ. 300 ನಿಗದಿಪಡಿಸಲಾಗಿದೆ. ಮಾಹಿತಿಗಾಗಿ 9900806088 ನಂಬರನ್ನು ಸಂಪರ್ಕಿಸಬಹುದಾಗಿದೆ.

Leave a Comment

error: Content is protected !!