24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಕಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ಅನುದಾನದಿಂದ ಅಳವಡಿಸಿದ ಸೋಲಾರ್ ಲೈಟ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ವತಿಯಿಂದ ಅಳವಡಿಸಿದ ಸೋಲಾರ್ ಲೈಟ್ ಕಳವಾಗಿರುವ ಘಟನೆ ಸೆ.30 ರಂದು ನಡೆದಿದೆ,.

2021-22 ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಅಳವಡಿಸಿದ ಸೋಲಾರ್ ಲೈಟ್ ಕಳವು ಆಗಿದ್ದು , ಕಳೆಂಜ ಗ್ರಾಮದ ಕುಂಟ್ಯಾನ್ ಎಂಬಲ್ಲಿಯ ಸುಲೈಮಾನ್ ಅವರ ಮನೆ ಹತ್ತಿರ ರೂ.25000/- ಮೌಲ್ಯದ ಸೋಲಾರ್ ಲೈಟ್, ಕಟ್ಲಾಜೆ ಎಂಬಲ್ಲಿಯ ಜಯರಾಜ್ ಎಂಬವರ ಮನೆ ಹತ್ತಿರ ರೂ.25000 ಮೌಲ್ಯದ ಸೋಲಾರ್ ಲೈಟ್ , ನಿಡ್ಡಾಜೆ ಕ್ರಾಸ್ ಬಳಿ ರೂ.25000 ಮೌಲ್ಯದ ಸೋಲಾರ್ ಲೈಟ್ ಕಳವಾಗಿರುತ್ತದೆ.

ಸದ್ರಿ ಸ್ಥಳಗಳಲ್ಲಿ ಅಳವಡಿಸಿದ ಸೋಲಾರ್ ಲೈಟ್ ಕಳವು ಆಗಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಮುಂಡಾಜೆಯ ಕವಯತ್ರಿ ಪದ್ಮಾ ಪಿ.ಬೇಡೇಕರ್ ರವರ ದರ್ಪಣ ಕವನ ಸಂಕಲನ ಬಿಡುಗಡೆ

Suddi Udaya

ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರೊ. ದಿ| ಎಸ್. ಪ್ರಭಾಕರ್ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆ

Suddi Udaya

ಮಡಂತ್ಯಾರು: ಪೆದ್ಯಾರ್ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯ: ಸುದ್ದಿ ಉದಯ ಜನಧ್ವನಿ Effect

Suddi Udaya

ಉಜಿರೆ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

Suddi Udaya

ತಣ್ಣೀರುಪಂತ ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರ

Suddi Udaya

ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಬೆಳಾಲು ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!