September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಕಲ್ಲಿಮಾರು ನಿವಾಸಿ ಹರಿಶ್ಚಂದ್ರರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಧನಸಹಾಯ

ಬೆಳ್ತಂಗಡಿ: ಆರ್ಥಿಕ ಸಂಕಷ್ಟದಲ್ಲಿದ್ದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಂದಾರು ಗ್ರಾಮದ ಕಲ್ಲಿಮಾರು ನಿವಾಸಿ ಹರಿಶ್ಚಂದ್ರ ಇವರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ರೂ.20ಸಾವಿರದ ಚೆಕ್ಕನ್ನು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಮಂಗಳೂರು ಇವರ ಮೂಲಕ ಫಲಾನುಭವಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಪದ್ಮ ಗೌಡ ಬೆಳಾಲು, ಕಾರ್ಯದರ್ಶಿ ಗಣೇಶ್ ಗೌಡ, ಕೋಶಾಧಿಕಾರಿ ಯುವರಾಜ ಅನಾರು, ಉಪಾಧ್ಯಕ್ಷರುಗಳಾದ ನಾರಾಯಣ ಗೌಡ ದೇವಸ್ಯ ಮತ್ತು ಧರ್ಣಪ್ಪ ಗೌಡ ಬಾನಡ್ಕ, ಜತೆ ಕಾರ್ಯದರ್ಶಿ ಶ್ರೀನಾಥ ನಡ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ದೇವಸ, ಸವಣಾಲು, ತಾಲೂಕು ಸಂಘದ ನಿರ್ದೇಶಕರುಗಳು, ಜಿಲ್ಲಾ ಮಾತೃ ಸಂಘದ ಸದಸ್ಯರಾದ ಗಣೇಶ್ ಗೌಡ ಕಲಾಯಿ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಮೋಹನ ಗೌಡ ಕೊಯ್ಯೂರು, ಯುವ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸ್ಪಂದನಾ ಸೇವಾ ಸಂಘದ ಸದಸ್ಯರುಗಳು ಹಾಗೂ ಗ್ರಾಮ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ದಿ| ವಸಂತ ಬಂಗೇರರ ಮನೆಗೆ ರಾಜ್ಯದ ಮಾಜಿ ಸಚಿವ ಪಿ.ಜಿ. ಆರ್ ಸಿಂಧ್ಯ ಭೇಟಿ

Suddi Udaya

ಕಾಜೂರು ದರ್ಗಾ ಹಾಗೂ ರಹ್ಮಾನಿಯಾ ಮಸ್ಜಿದ್ ನಲ್ಲಿ ಈದ್ ಆಚರಣೆ

Suddi Udaya

ತೆಲುಗು ನಟ ಶ್ರೀಕಾಂತ್ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

Suddi Udaya

ಬಳಂಜ: ಉದ್ಯಮಿ, ಕೃಷಿಕ ರಾಕೇಶ್ ಹೆಗ್ಡೆಯವರ ಇಕೋಫ್ರೆಶ್ ಫಾರ್ಮ್ ನಲ್ಲಿ ಬೆಳೆದ ಪ್ರಥಮ ಬೆಳೆ: ಡ್ರ್ಯಾಗನ್ ಫ್ರೂಟ್ ನ್ನು ಬಳಂಜ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ, ಫ್ರೂಟ್ ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಶ್ರವಣ್ ನೇಮಕ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya
error: Content is protected !!