27.5 C
ಪುತ್ತೂರು, ಬೆಳ್ತಂಗಡಿ
April 3, 2025
Uncategorized

ಬೆಳ್ತಂಗಡಿ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ರದ್ದುಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮನವಿ

ಬೆಳ್ತಂಗಡಿ: ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಉರ್ದು ಭಾಷೆಯನ್ನು ಆಯ್ಕೆ ಮಾಡದಿದ್ದರೆ ಅರ್ಜಿಯ ಮುಂದಿನ ಪ್ರಕ್ರಿಯೆ ಮಾಡಲು ಸಾಧ್ಯವಿಲ್ಲ. ಈ ಮೂಲಕ ಕರ್ನಾಟಕ ಸರ್ಕಾರ ಕ್ರೈಸ್ತರಿಗೆ ಹಾಗೂ ಹಿಂದುಗಳಿಗೆ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿರುವುದು ಸ್ಪಷ್ಟ ಗಮನಕ್ಕೆ ಬರುತ್ತದೆ. ಕನ್ನಡವೇ ರಾಜ್ಯ ಭಾಷೆ. ಈ ರೀತಿ ಉರ್ದು ಭಾಷೆಗೆ ಕಡ್ಡಾಯ ಮಾಡಿ ಕನ್ನಡಿಗರನ್ನು ಸಹ ಅವಮಾನ ಮಾಡಿರುವುದು ಕಂಡುಬರುತ್ತದೆ. ಈ ಹುದ್ದೆಯನ್ನು ಪಡೆಯಬೇಕಾದರೆ ಉರ್ದು ಕಲಿಯುವ ಅನಿವಾರ್ಯತೆಯನ್ನು ಮಾಡಿ ಉರ್ದು ಭಾಷೆ ವೈಭವೀಕರಣವನ್ನು ಮಾಡುವ ಪ್ರಯತ್ನ ನಡೆಯುತ್ತಿದೆಯಾ ಎನ್ನುವಂತಹ ಪ್ರಶ್ನೆಯು ಮೂಡುತ್ತದೆ.

ಅಷ್ಟೇ ಅಲ್ಲದೆ ಕೇವಲ ಉರ್ದು ಭಾಷಿಕ ಮಹಿಳೆಯರೇ ಇನ್ನು ಅಂಗನವಾಡಿ ಕೇಂದ್ರಗಳನ್ನು ನಡೆಸಲು ಅವಕಾಶ ನೀಡಲಾಗುತ್ತಿದೆಯೇ? ಜೊತೆಗೆ ಈ ಹುದ್ದೆ ಇನ್ನು ಕೇವಲ ಅವರಿಗೆ ಮಾತ್ರ ಸೀಮಿತವೇ ಎಂಬ ಭೀತಿ ಈಗ ಜನರಲ್ಲಿ ನಿರ್ಮಾಣವಾಗಿದೆ! ಹಾಗಾಗಿ ಸಮಸ್ತ ಹಿಂದೂಗಳು ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ಆದುದರಿಂದ ಇಲಾಖೆಯು ಈ ಆದೇಶವನ್ನು ಕೂಡಲೇ ಹಿಂಪಡೆದು ಜಾಲತಾಣದಲ್ಲಿ ಅವಶ್ಯಕ ಬದಲಾವಣೆ ಮಾಡಬೇಕೆಂದು ಹಿಂದೂ ಜನಜಾಗೃತಿ ವೇದಿಕೆಯ ವತಿಯಿಂದ ಬೆಳ್ತಂಗಡಿ ತಹಶೀಲ್ದಾರರಾದ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ವಕೀಲರಾದ ಉದಯ ಬಿ.ಕೆ,. ಬಳಂಜ ಶ್ರೀ ನಾಗಬ್ರಹ್ಮ ದೇವಸ್ಥಾನ ಮೊಕ್ತೇಸರರು ಜಯ ಸಾಲಿಯಾನ್, ಸಂಜೀವ ಶೆಟ್ಟಿ ಉಜಿರೆ, ಶಿವರಾಮ್ ಉಜಿರೆ, ವಸಂತ ಬಂಗೇರ, ಶಶಿಧರ ಪೆರಿಯಡ್ಕ, ಎಂ. ಹರೀಶ್ ಜಿ ಉಪಸ್ಥಿತರಿದ್ದರು.

Related posts

ವಾಣಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ನೇತ್ರಾವತಿಯಲ್ಲಿ ಅನ್ನಪೂರ್ಣ ಹೋಟೆಲ್ ನಡೆಸುತ್ತಿದ್ದ ಕನ್ಯಾಡಿಯ ಗೋಪಾಲ್ ಪೂಜಾರಿ ನಿಧನ

Suddi Udaya

ಎಸ್. ಡಿ. ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳಾಲು ಪ್ರೌಢಶಾಲೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮ

Suddi Udaya

ಮೇ.3 : ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

Suddi Udaya

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya
error: Content is protected !!