25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಬಂಟರ ಸಂಘದ ಖಾಯಂ ಆಹ್ವಾನಿತರ, ನಿರ್ದೇಶಕ ಮಂಡಳಿ ಸಭೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ಖಾಯಂ ಆಹ್ವಾನಿತರ ಸಭೆಯು ಸೆ.29 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜಯಂತ ಶೆಟ್ಟಿ ಮಡಂತ್ಯಾರು ಇವರ ಅದ್ಯಕ್ಷತೆಯಲ್ಲಿ ಜರಗಿತು.

ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಶೆಟ್ಟಿ ವರದಿ ವಾಚಿಸಿ ಸದಸ್ಯತನ ಅರ್ಜಿಗಳ ವಿವರವನ್ನು ಸಭೆಯ ಮುಂದಿಟ್ಟರು. ತೆರಿಗೆ ಪಾವತಿಗೆ ವಿಶೇಷ ಶ್ರಮ ವಹಿಸಿದ ಸಂಘದ ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ ಇವರನ್ನು ಅಭಿನಂದಿಸಲಾಯಿತು. ತೆರಿಗೆ ಪಾವತಿಸಲು ಸಹಕರಿಸಿದ ಪ್ರಶಾಂತ್ ಶೆಟ್ಟಿ ಮಡಂತ್ಯಾರು ಹಾಗೂ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಯುವ ವಿಭಾಗಕ್ಕೆ ಆಯ್ಕೆಯಾದ ಪ್ರತೀಕ್ ಶೆಟ್ಟಿ ಮತ್ತು ಮಹಿಳಾ ವಿಭಾಗಕ್ಕೆ ಆಯ್ಕೆಯಾದ ಶ್ರೀಮತಿ ಜಯಲಕ್ಷ್ಮಿ ಸಾಮಾನಿ ಇವರ ತಂಡವನ್ನು ಅಭಿನಂದಿಸಲಾಯಿತು. ಸಂಘಟನಾ ಸಂಚಾಲಕರದ ಸೀತಾರಾಮ ಶೆಟ್ಟಿ ಕೆಂಬರ್ಜೆ ಹಾಗೂ ರಘುರಾಮ ಶೆಟ್ಟಿ ಸಾಧನ ಸಂಘಟನೆ ಹಾಗೂ ನೂತನ ವಲಯವರು ತಂಡ ರಚನೆಯ ಪ್ರಗತಿಯ ಬಗ್ಗೆ ಸಭೆಗೆ ವಿವರ ನೀಡಿದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿ ನಿಧಿ ಸಂಚಾಲಕರದ ಅಜಿತ್ ಕುಮಾರ್ ಕೊರ್ಯಾರು ಹಾಗೂ ರಾಧಾಕೃಷ್ಣ ಶೆಟ್ಟಿ ಅಂಬೆಟ್ಟು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಈಗಾಗಲೇ ಆಯ್ಕೆಯಾದ ನೂತನ ವಲಯವಾರು ತಂಡಗಳನ್ನ ಅಭಿನಂದಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಉಪಾಧ್ಯಕ್ಷ ನವೀನ್ ಸಾಮಾನಿ ಕರಂಬಾರುಬೀಡು ಉಪಸ್ಥಿತರಿದ್ದರು. ಜತೆಕಾರ್ಯದರ್ಶಿ ಕಿರಣ್ ಶೆಟ್ಟಿ ಧನ್ಯವಾದವಿತ್ತರು.

Related posts

ಮಚ್ಚಿನ: ಕುತ್ತಿನ ಸರಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಪೆರೋಡಿತ್ತಾಯಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಪುಸ್ತಕ ವಿತರಣೆ

Suddi Udaya

ಅವಕಾಶಗಳ ಆಗರ, ಸಾಧನೆಗಳ ಸಾಗರ, ಕರಾವಳಿ ಪ್ರವಾಸೋದ್ಯಮ: ಸಂಪತ್ ಬಿ. ಸುವರ್ಣ

Suddi Udaya

ಆಪರೇಷನ್ ಸಿಂಧೂರ್” – ಪಹಲ್ಗಾಮ್ ದಾಳಿಗೆ ಪ್ರತೀಕಾರ

Suddi Udaya

ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ ಬಳಂಜ ಗ್ರಾಮ ಪಂಚಾಯತ್ ಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಂದ ಪ್ರಶಸ್ತಿ ಪ್ರದಾನ

Suddi Udaya
error: Content is protected !!