ಉಜಿರೆ: ಇಲ್ಲಿನ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ವಿದ್ಯಾರ್ಥಿಗಳಾದ ಅದ್ವಿತಿ – ಭಗವದ್ಗೀತೆಯ ಶ್ಲೋಕಗಳನ್ನು ,ಅನಾಸ್ – ಕುರಾನ್ ಮತ್ತು ಅಕ್ಷರ್ – ಜೈನ ನಮೋಮಂತ್ರ ವನ್ನು ಪಟಿಸಿದರು. ಹತ್ತನೇ ತರಗತಿಯ ಸುಮಿತ್ರ ಗಾಂಧೀಜಿಯವರ ಶುಭಾಶಿತಗಳನ್ನು ಪ್ರಸ್ತುತ ಪಡಿಸಿ, ಮೋಕ್ಷಾ ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಕುರಿತು ಮಾತನಾಡಿದರು.
ಏಳನೇ ತರಗತಿಯ ರಚನ ಗಾಂಧೀಜಿಯ ಜಯಂತಿಯ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳಿಂದ ಗಾಂಧೀಜಿಯವರು ಬಾಲ್ಯದಲ್ಲಿ ಪ್ರಾಮಾಣಿಕತೆಯನ್ನು ಮೆರೆದ ವಿಷಯವನ್ನು ಕುರಿತಾದ ಮತ್ತು
ಗಾಂಧೀಜಿಯವರು ವೀಕ್ಷಿಸಿದ ಶ್ರವಣ ಕುಮಾರ ನಾಟಕದಿಂದ ಅವರ ಜೀವನದಲ್ಲಿ ಆದ ಬದಲಾವಣೆಯ ಕುರಿತಾದ ನಾಟಕವನ್ನು ಪ್ರಸ್ತುತ ಪಡಿಸಲಾಯಿತು.
ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿ ಶಾಲೆಯ ವಠಾರದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಧುಶ್ರೀ ನಿರೂಪಿಸಿ ದೀಪಿಕಾ ಸ್ವಾಗತಿಸಿ ಕವನ ವಂದಿಸಿದರು.