32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

ಮಡಂತ್ಯಾರು: ಜೆಸಿಐ ಮಡಂತ್ಯಾರು ಸಂಸ್ಥೆಯು ಕಳೆದ 33 ವರ್ಷಗಳಿಂದ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದ ಸಂಸ್ಥೆಯಾಗಿದೆ. ಒಂದು ವಾರಗಳ ಕಾಲ ಜೆಸಿ ಸಪ್ತಾಹವನ್ನು ಮಡಂತ್ಯಾರಿನ ಹಬ್ಬವಾಗಿ ಆಚರಿಸಿ ಜೆಸಿಐ ಭಾರತದಲ್ಲಿ ಅದ್ದೂರಿಯ ಜೆಸಿ ಸಪ್ತಾಹಕ್ಕೆ ಮೂರು ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ ಎಂದು ಮಡಂತ್ಯಾರು ಜೆಸಿಐ ಘಟಕದ ಪೂರ್ವಾದ್ಯಕ್ಷ ತುಳಸಿದಾಸ್ ಪೈ ಹೇಳಿದರು.

ಅವರು ಅ. 2ರಂದು ಸುವರ್ಣ ಆರ್ಕೇಡ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಡಂತ್ಯಾರು ಘಟಕಾಧ್ಯಕ್ಷ ವಿಕೇಶ್ ಮಾನ್ಯರವರ ಅಧ್ಯಕ್ಷತೆಯಲ್ಲಿ ಈ ಬಾರಿಯ ವರ್ಣರಂಜಿತ ಜೆಸಿ ಸಪ್ತಾಹ ‘ವಿಜಯ’ ಸರ್ವತ್ರ ವಿಜಯೀ ಪ್ರಾಪ್ತಿ ರಸ್ತು – 2024 ಅ‌ 13 ರಿಂದ 19 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.

ಸಪ್ತಾಹದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಮಾಡಲಿದ್ದಾರೆ. ಏಳು ದಿನ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸ್ಪರ್ದೆಗಳು, ನಾಟಕ, ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವಿಶೇಷವಾಗಿ ವಿವಿಧ ಕ್ಷೇತ್ರದ 15 ಸಾಧಕರಿಗೆ ಜೆಸಿ ಸಾಧನಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದ್ದು, ಸಪ್ತಾಹದ ಸಮಾರೋಪದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಮಡಂತ್ಯಾರು ಅಧ್ಯಕ್ಷ ವಿಕೇಶ್ ಮಾನ್ಯ, ನಿಕಟಪೂರ್ವಾಧ್ಯಕ್ಷ ಅಶೋಕ್ ಗುಂಡಿಯಲ್ಕೆ, ಕಾರ್ಯದರ್ಶಿ ಸಂಯುಕ್ತ್ ಪೂಜಾರಿ, ಸಪ್ತಾಹ ಸಂಯೋಜಕ ಯತೀಶ್ ರೈ,ಸಹ ಸಂಯೋಜಕ ಮನೋಜ್ ಮಾಯಿಲೋಡಿ ಉಪಸ್ಥಿತರಿದ್ದರು.

Related posts

ಅಧಿಕಾರಿಗಳಿಂದ ನಮಗೆ ಮಾನಸಿಕ ಹಿಂಸೆ : ಗಿರಿಯಪ್ಪ ಗೌಡ ನಾಗನಡ್ಕ ಆರೋಪ

Suddi Udaya

ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪ.ಜಾತಿ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಣೆ

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಗರ್ಡಾಡಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ವಿತರಣೆ

Suddi Udaya

ಬೆಳ್ತಂಗಡಿ ತುಳುನಾಡು ಕೋಳಿ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ: ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಉಚ್ಚೂರು, ಪ್ರ.ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು

Suddi Udaya

ಧರ್ಮಸ್ಥಳ: ಬೈಕ್ ಗೆ ಕಾರು ಡಿಕ್ಕಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!