29 C
ಪುತ್ತೂರು, ಬೆಳ್ತಂಗಡಿ
April 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅ.3-12 : ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ

ಕನ್ಯಾಡಿ : ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರ ಕನ್ಯಾಡಿಯಲ್ಲಿ ಅ.3ರಿಂದ 12ರವರೆಗೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ‘ನವದುರ್ಗೆ’ಯವರ ದಿವ್ಯ ಸಾನಿಧ್ಯದಲ್ಲಿ ನವರಾತ್ರಿ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿಯಲ್ಲಿ ನಡೆಯಲಿದೆ.

ಅ.3ರಂದು ಶೈಲಪುತ್ರಿ ದೇವಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅನ್ನಛತ್ರ ವಿಶೇಷ ಪೂಜೆ, ಅ.4ರಂದು ಬ್ರಾಹ್ಮಣಿ ದೇವಿಗೆ ವಿಶೇಷ ಪೂಜೆ, ಅ.5ರಂದು ಚಂದ್ರಘಂಟಾ ದೇವಿಗೆ ವಿಶೇಷ ಪೂಜೆ, ಅ.6 ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ಅ.7ರಂದು ಸ್ಕಂದಮಾತ ದೇವಿಗೆ ಮತ್ತು ಶ್ರೀದುರ್ಗಾ ಪರಮೇಶ್ವರಿ ವಿಶೇಷ ಪೂಜೆ, ಚಂಡಿಕಾ ಹೋಮ, ಅ.8ರಂದು ಕಾತ್ಯಾಯಿನಿ ದೇವಿಗೆ ವಿಶೇಷ ಪೂಜೆ, ಅ.9ರಂದು ಕಾಳರಾತ್ರಿ ದೇವಿಗೆ ವಿಶೇಷ ಪೂಜೆ, ಅ.10ರಂದು ಮಹಾಗೌರಿ ದೇವಿಗೆ ವಿಶೇಷ ಪೂಜೆ, ಅ.11ರಂದು ಸಿದ್ದಿದಾತ್ರಿ ದೇವಿಗೆ ವಿಶೇಷ ಪೂಜೆ, ಅ.12ರಂದು ವಿಜಯದಶಮಿ ವಿಶೇಷ ಪೂಜೆ, ಆಯುಧ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಲ್ಮಂಜ 87 ವಾರ್ಡಿನಲ್ಲಿ ಒಂಬತ್ತು ನಾರಿಮಣಿಗಳಿಂದ ಪ್ರಥಮ ಮತ ಚಲಾವಣೆ

Suddi Udaya

ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ತೋಡುಗಳ ಹೂಳೆತ್ತುವ ಕಾರ್ಯ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದಲ್ಲಿ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ

Suddi Udaya

ಮಳೆಗೆ ಕೊಚ್ಚಿ ಹೋದ ಕಿರು ಸೇತುವೆಗೆ ತಾತ್ಕಾಲಿಕ ರಸ್ತೆ ನಿರ್ಮಾಣ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ

Suddi Udaya

ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿಯಿಂದ ಸಮಲೋಚನಾ ಸಭೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ