23.4 C
ಪುತ್ತೂರು, ಬೆಳ್ತಂಗಡಿ
March 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಗಾಂಧೀಜಿ ಜಯಂತಿ ಆಚರಣೆ

ಉಜಿರೆ : ಗಾಂಧೀಜಿಯವರ ತತ್ವಗಳು ನಶಿಸಿ ಹೋಗಿವೆ ಆದರೆ ಅವರ ಕೆಲವು ತತ್ವಗಳು ಇವತ್ತಿಗೂ ಪಾಲಿಸುತ್ತಾರೆ ಸತ್ಯವನ್ನು ಹೇಳಬೇಕು ,ಸರಳವಾಗಿರಬೇಕು, ನಮ್ಮ ಕೆಲಸವನ್ನು ನಾವೇ ಮಾಡಬೇಕು ಒಂದು ಕೆನ್ನೆಗೆ ಒಡೆದಾಗ ಇನ್ನೊಂದು ಕೆನ್ನೆ ತೋರಿಸಬೇಕು ಎಂದು ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ತಿಳಿಸಿದರು.


ಅವರು ಅ. 2 ರಂದು ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿಧ್ಯಾರ್ಥಿನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ನಡೆದ ಗಾಂಧೀಜಿಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಮಾಡಿ ಮುಖ್ಯ ಅಥಿತಿ ಸ್ಥಾನದಿಂದ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ರತ್ನಮಾನಸ ವಸತಿ ನಿಲಯದ ಪಾಲಕರಾದ ಯತೀಶ್ ಕೆ ಬಳಂಜರವರು ಮಾತನಾಡಿ ಕೆಲವನ್ನು ನೋಡುವುದರ ಮೂಲಕ ಕಲಿಯಬೇಕು ಕೆಲವನ್ನು ಮಾಡುವುದರ ಮೂಲಕ ಕಲಿಯಬೇಕು. ಮಾರ್ಕ್ಸ್ ಗಿಂತ ರಿಮಾರ್ಕ್ ಇಲ್ಲದೆ ಬದುಕುವುದು ಉತ್ತಮ.
ಇತ್ತಿಚೀನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ದ ಜೊತೆಗೆ ಜೀವನ ಶಿಕ್ಷಣ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ರೆಸಿಡೆನ್ಸಿಯಲ್ ಕಾಲೇಜಿನ ಪಾಂಶುಪಾಲರಾದ ಸುನಿಲ್ ಪಂಡಿತ್ ಸ್ವಾಗತಿಸಿ ರತ್ನಮಾನಸದ ಅದ್ಯಪಕರಾದ ರವಿಚಂದ್ರರವರು ಧನ್ಯವಾದ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಪಾಲಕಾರದ ವಿಶ್ವನಾಥ ಹಾಗೂ ಶಿಕ್ಷಕರಾದ ಅಕಿಲ್ ,ರೋಷನ್ ,ಉಮೇಶ್ ಮತ್ತು ರತ್ನಮಾನಸ ದ ಶಿಕ್ಷಕರಾದ ಉದಯರಾಜ್ ,ದೀಪಕ್ ಕೆ ಉಪಸ್ಥಿತರಿದ್ದರು.

Related posts

ಲಾಯಿಲ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿ ಪೂಜೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ: ನವನೀತ್ ಕೊಯ್ಯೂರು ಅವರ ತಂಡ ದ್ವಿತೀಯ ಸ್ಥಾನ

Suddi Udaya

ಸರಳಿಕಟ್ಟೆ: ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್: ಅಜಿಲಮೊಗರು – ಸರಳಿಕಟ್ಟೆ- ಉಪ್ಪಿನಂಗಡಿ ಸಂಪರ್ಕ ಕಡಿತ

Suddi Udaya

ಉಜಿರೆ: ಸಾನಿಧ್ಯ ಕೌಶಲ್ಯ ತರಬೇತಿ ಕೆಂದ್ರದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

Suddi Udaya

ಗುಂಡೂರಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಶಿಬಿರ

Suddi Udaya
error: Content is protected !!