April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಳಂಜ ಸ.ಉ. ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ತಾಯಿಗೊಂದು ಗಿಡ ನೆಡುವ ಕಾರ್ಯಕ್ರಮ

ಬಳಂಜ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಳಂಜ, ಅ.01 ತಾಯಿಗೊಂದು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪೋಷಕರೊಂದಿಗೆ ತುಂಬಾ ಸಂತೋಷದಿಂದ ಪಾಲ್ಗೊಂಡರು. ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಗಿಡ ನೆಡುವ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಲ್ಲಿ ಬಹಳ ಮುಖ್ಯವಾಗಿದೆ. ಮಕ್ಕಳು ಹಣ್ಣಿನ ಹಾಗೂ ತರಕಾರಿ ಗಿಡಗಳನ್ನು ಮತ್ತು ತೆಂಗಿನಕಾಯಿ ,ಅಡಿಕೆ ಸಸಿಗಳನ್ನು ನೆಡುವುದರ ಮೂಲಕ ಸಂಭ್ರಮಿಸಿದರು. ಮಕ್ಕಳು ತಾವು ನೆಟ್ಟ ಗಿಡಕ್ಕೆ ತಮ್ಮ ತಮ್ಮ ತಾಯಂದಿರ ಹೆಸರನ್ನು ಇಟ್ಟು ತಾವೇ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡರು.

Related posts

ಇಳಂತಿಲ: ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಜೂ.16: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಎರಡನೇ ಅವಧಿಗೆ ಮೀಸಲಾತಿ ನಿಗದಿ

Suddi Udaya

ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

Suddi Udaya

ನಾವರ ,ಕುದ್ಯಾಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಉಜಿರೆ ಅಮೃತ್‌ ಸಿಲ್ಕ್ ನಲ್ಲಿ ಮನ್ಸೂನ್ (ಆಷಾಢ) ಸೇಲ್ಸ್: ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ಡಿಸ್ಕೌಂಟ್

Suddi Udaya

ಸ್ಪಂದನ ಪಾಲಿಕ್ಲಿನಿಕ್ ವತಿಯಿಂದ ಮನೆ ಬಾಗಿಲಿಗೆ ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸುವ ವ್ಯವಸ್ಥೆ

Suddi Udaya
error: Content is protected !!