25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೌಕ್ರಾಡಿ-ಕೊಕ್ಕಡ ಸಂತ ಜೋನರ ಹಿ.ಪ್ರಾ. ಶಾಲಾಯಲ್ಲಿ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

ಕೊಕ್ಕಡ ಕರ್ನಾಟಕ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು,ಮಂಗಳೂರು ಕಿನ್ನಿಕಂಬಳ ರೋಸಾ ಮಿಸ್ತಿಕ ಪ.ಪೂ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಅ.3ರಂದು ಕೌಕ್ರಾಡಿ-ಕೊಕ್ಕಡ ಸಂತ ಜೋನರ ಹಿ.ಪ್ರಾ. ಶಾಲಾ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತು ಉದ್ಘಾಟನೆಯನ್ನು ಮಂಗಳೂರು ಬೆಥನಿ ಪ್ರಾಂತ್ಯಾಧಿಕಾರಿಣಿ ಲಿಲ್ಲಿ ಪಿರೇರ.ಬಿ.ಎಸ್ ಅವರು ನಡೆಸಿಕೊಟ್ಟರು. ಸಂತ ಜೋನರ ದೇವಾಲಯ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿಸಿಲ್ವ ಅವರು ಆಶೀರ್ವಚನ ನೀಡಿದರು.

ಅತಿಥಿಗಳಾಗಿ ಸಂತ ಜೋನರ ಹಿ.ಪ್ರಾ. ಶಾಲೆ ಮುಖ್ಯಶಿಕ್ಷಕಿ ಜೆನೆವಿವ್ ಫೆರ್ನಾಂಡೀಸ್,ಕೊಕ್ಕಡ ಕಪಿಲ ಅಧ್ಯಕ್ಷ ಸಂತೋಷ್ ಜೈನ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್, ಕೊಕ್ಕಡ ಸಂತ ಜೋನರ ದೇವಾಲಯ ಪಾಲನಾ ಸಮಿತಿ ಉಪಾಧ್ಯಕ್ಷ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ, ಮಿಸ್ತಿಕ ಪ.ಪೂ ಕಾಲೇಜು ಸಂಚಾಲಕಿ ರೋಸ್ ಲೀಟಾ.ಬಿ.ಎಸ್ , ರೋಸಾ ಮಿಸ್ತಿಕಾ ಪ.ಪೂ ಕಾಲೇಜು ಪ್ರಾಚಾರ್ಯ ಡಾ.ಸಾಧನಾ ಬಿ.ಎಸ್ ಉಪಸ್ಥಿತರಿದ್ದರು.

ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೆಶ್ ಬಾಣಜಾಲು ಅವರು ಶುಭ ಹಾರೈಸಿದರು. ಸದಸ್ಯ ಮಹೇಶ್ ಉಪಸ್ಥಿತರಿದ್ದರು. ಅ.3ರಿಂದ ಅ.9ರವರೆಗೆ ನಡೆಯುವ ಎನ್ ಎಸ್ ಎಸ್ ಶಿಬಿರದಲ್ಲಿ 51 ಶಿಬಿರಾರ್ಥಿಗಳು ಭಾಗವಹಿಸುತ್ತಾರೆ. ಡಾ.ಸಾಧನಾ ಸ್ವಾಗತಿಸಿದರು, ಸಹಶಿಬಿರಾಧಿಕಾರಿ ಆ್ಯ ಮ್ಸಿ ಲ್ ಫೆರ್ನಾಂಡೀಸ್ ವಂದಿಸಿದರು. ಶಿಬಿರಾಧಿಕಾರಿ ಅವಿಲ್ ರೆನಿಲ್ ಡಿಸಿಲ್ವಾ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು, ಪೋಷಕರು, ಊರ ನಾಗರಿಕರು ಭಾಗವಹಿಸಿದರು.

Related posts

ಕೊಕ್ಕಡ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಅಶಕ್ತರಿಗೆ ನೆರವು

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳ ಗಿರಿಯಲ್ಲಿ ಸಂಭ್ರಮದ ನಾಗರಪಂಚಮಿ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ವಿಜೇತರಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಅಭಿನಂದನೆ

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರುಗೊಳಿಸಲು ಸಚಿವ ಸಂಪುಟ ಅನುಮೋದನೆ

Suddi Udaya

ಮಗುವಿಗೊಂದು ಮರ ಯೋಜನೆಗೆ ಮುಂದಾದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆ

Suddi Udaya

ಗುರುವಾಯನಕೆರೆ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷರಾಗಿ ಮುಗುಳಿ ನಾರಾಯಣ ಭಟ್, ಉಪಾಧ್ಯಕ್ಷರಾಗಿ ವಡಿವೇಲು

Suddi Udaya
error: Content is protected !!