ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ ೧ ಮತ್ತು ೨ , ಯೂತ್ ರೆಡ್ ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಇದರ ಜಂಟಿ ಆಶ್ರಯದಲ್ಲಿ”ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ಸೆ.28 ರಂದುಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರಿನ ಹಿರಿಯ ವೈದ್ಯಾಧಿಕಾರಿ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತುರ್ ಅವರು ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಯುಕ್ತ ಯುಕ್ತ ಆಹಾರ ಪದಾರ್ಥಗಳನ್ನು, ತರಕಾರಿ, ಹಣ್ಣು ತಿನ್ನಬೇಕು ಮತ್ತು ನಮ್ಮ ಆರೋಗ್ಯಕ್ಕೆ ಬೇಕಾದ ಆಹಾರ ಗಳನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಮಾಧವರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಸಂಚಾಲಕರಾದ ಡಾ. ಅವಿತ ಮರಿಯ ಕ್ವಾಡ್ರಸ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ. ಚಿತ್ರಾ ಪಡಿಯಾರ್ ಮತ್ತು ಪ್ರೊ. ಸಂತೋಷ್ ಪ್ರಭು, ಯೂತ್ ರೆಡ್ ಕ್ರಾಸ್‌ನ ಡಾ. ವೈಶಾಲಿ ಯು ಮತ್ತು ಪ್ರೊ| ಶೇಖರ್ ಕೆ, ರೋವರ್ಸ್ ಮತ್ತು ರೇಂಜರ್ಸ್ ನ ಸಂಯೋಜಕ ಡಾ. ಪ್ರೀತಿ ಕೆ ರಾವ್ ಮತ್ತು ಪ್ರೊ|ಆಂಜನೇಯ ಎಂ ಎನ್ ಉಪಸ್ಥಿತರಿದ್ದರು.
ಕು| ಏಕಿತ ಸಂನನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಜಿತೇಶ್ ಸ್ವಾಗತಿಸಿದರು, ಕು|ದಿವ್ಯಾ ವಂದಿಸಿದರು ಕು| ಯೋಗಿತಾ ನಿರೂಪಿಸಿದರು.