ಮಲವಂತಿಗೆ : ಮಲವಂತಿಗೆ ಗ್ರಾಮದ ಏಳನೀರು ಹೋಗುವ ರಸ್ತೆಯ ಮುಖಾಂತರ 5 ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಎರಡು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮುರಳಿಧರನಾಯ್ಕ ಕೆ ಜಿ , ಪೊಲೀಸ್ ಉಪನಿರೀಕ್ಷಕರು (ಕಾ&ಸು) ಬೆಳ್ತಂಗಡಿ ಪೊಲೀಸ್ ಠಾಣೆ ಬೆಳ್ತಂಗಡಿರವರು ಠಾಣಾ ಸಿಬ್ಬಂದಿಗಳೊಂದಿಗೆ 2 ಪಿಕಪ್ ವಾಹನಗಳನ್ನು ಅ.03ರಂದು ರಾತ್ರಿ ತಡೆಹಿಡಿದು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಅಕ್ರಮವಾಗಿ ಗುತ್ಯಾಡ್ಕದಿಂದ ದಿಡುಪೆ ರಸ್ತೆ ಮೂಲಕ ವಾಹನ ಒಂದರಲ್ಲಿ 2 ಗೋವು, ಮತ್ತೊಂದು ವಾಹನದಲ್ಲಿ 3 ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದಲ್ಲಿದ್ದ ಆಪಾದಿತರುಗಳ ಬಳಿ ವಿಚಾರಿಸಲಾಗಿ ಅವರುಗಳು ಯಾವುದೇ ಪರವಾನಿಗೆ ಇಲ್ಲದೇ ಜಾನುವಾರುಗಳನ್ನು ಮಾಂಸಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಮುಂದಿನ ಕಾನೂನುಕ್ರಮಕ್ಕಾಗಿ 02 ಪಿಕಪ್ ವಾಹನಗಳನ್ನು ಹಾಗೂ 05 ಜಾನುವಾರುಗಳನ್ನು ಮತ್ತು ಆರೋಪಿಗಳಾದ ಚಿಬಿದ್ರೆ ನಿವಾಸಿ ಯತೀಂದ್ರ (24) ,ಚಾರ್ಮಾಡಿ ನಿವಾಸಿ ಉಸ್ಮಾನ್ (36), ತೊಟತ್ತಾಡಿ ನಿವಾಸಿ ಅರವಿಂದ (30), ಚಿಬಿದ್ರೆ ನಿವಾಸಿ ಆರೀಫ್ (27) ಎಂಬವರುಗಳನ್ನು ವಶಕ್ಕೆ ಪಡೆದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 84/2024 ಕಲಂ 5,7,12 ಕರ್ನಾಟಕ ಜಾನುವಾರು ಪ್ರತಿಬಂಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಆದ್ಯಾದೇಶ 2020 ಮತ್ತು ಕಲಂ 11(ಡಿ) ಪ್ರಾಣಿ ಹಿಂಸೆ ತಡೆಕಾಯಿದೆ 1960 ರಂತೆ ಪ್ರಕರಣ ದಾಖಲಾಗಿರುತ್ತದೆ.