ಬೆಳಾಲು: ಶ್ರೀ ಅನಂತೇಶ್ವರ ಭಜನಾ ಮಂಡಳಿ ಅನಂತೋಡಿ ಬೆಳಾಲು ಇದರ ಮುಂದಾಳತ್ವದ್ಲಲಿ ಅ.4 ರಂದು ಶ್ರೀ ಅನಂತ ಪದ್ಮನಾಭ ದೇವಸ್ಥಾನ ವಠಾರದಲ್ಲಿ ಮಕ್ಕಳ ಭಜನಾ ತರಬೇತಿ ತಂಡವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಅರ್ಚಕರಾದ ಸಂಪತ್ ಕುಮಾರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ನವೀನ್ ಕಂಬಳದಡ್ಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ ರವರು ಆಗಮಿಸಿ, ಸನಾತನ ಧಾರ್ಮಿಕ ಭಾವನೆಯನ್ನು ಪ್ರತಿ ಮನೆ-ಮನಗಳಲ್ಲೂ ಕಿರಿಯ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ನಮ್ಮದೆಲ್ಲರದ್ದು ಆಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಮಾತನಾಡುತ್ತ ಧಾರ್ಮಿಕ ಭಾವನೆ ಮಕ್ಕಳಲ್ಲಿ ಮೂಡಿಸಿದಾಗ ಪ್ರತಿ ಮನೆಯಲ್ಲೂ ಭಕ್ತಿ ಭಾವನೆ ಬರಲು ಸಾಧ್ಯವಿದೆ ಎಂದರು. ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣ ಪರಿಣಾಮದಿಂದ ಸಮಾಜದಲ್ಲಿ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂದರು.,
ವೇದಿಕೆಯಲ್ಲಿ ಮಮತಾ ದಿನೇಶ್ ಪೂಜಾರಿ, ತರಬೇತಿ ಶಿಕ್ಷಕಿಯರಾದ ಸೌಮ್ಯರಾವ್, ಶ್ರೀನಿವಾಸ್ ಗೌಡ , ಗಣಪನಗುತ್ತು, ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಜಾರಪ್ಪ ಗೌಡ ಉಪಸ್ಥಿತರಿದ್ದರು.
65 ವಿದ್ಯಾರ್ಥಿಗಳಿಗೆ ಭಜನಾ ತರಬೇತಿಯನ್ನು ಸುಮಾರು 6 ತಿಂಗಳು ಕಾಲ ನೀಡಲು ಪೋಷಕರು ದೇವಸ್ಥಾನ ಸಮಿತಿ ಭಜನಾ ಮಂಡಳಿ ಸದಸ್ಯರು ಸಹಕರಿಸಿದರು.
ಗಿರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸತೀಶ್ ಎಳ್ಳುಗದ್ದೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಜಾರಪ್ಪ ಗೌಡ ಧನ್ಯವಾದವಿತ್ತರು.