32.9 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿ

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

ಬೆಳ್ತಂಗಡಿ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡ್ ಎಸ್ ಬಿ ಐ ಬ್ಯಾಂಕಿನಲ್ಲಿ ಸೆ.04 ರಂದು ಬೆಳಿಗ್ಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 147/2024 ಕಲಂ: 303(2) ಬಿ ಎನ್ ಎಸ್ – 2023 ರಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿ, ಆರೋಪಿಯ ಪತ್ತೆಗಾಗಿ ರಚಿಸಲಾಗಿದ್ದ ಬಂಟ್ವಾಳ ಉಪ-ವಿಭಾಗದ ವಿಶೇಷ ತನಿಖಾ ತಂಡವು, ಆರೋಪಿ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಆರೋಪಿ ಬೆಳ್ತಂಗಡಿ ತಾಲೂಕಿನ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ (32), ಎಂಬಾತನನ್ನು ವಶಕ್ಕೆ ಪಡೆದು, ಆರೋಪಿಯಿಂದ 80,000 ರೂ ನಗದು ಹಣವನ್ನು ಸ್ವಾಧೀನಪಡಿಸಿರುತ್ತಾರೆ.

ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರರವರ ಮಾರ್ಗದರ್ಶನದಲ್ಲಿ, ಎಸ್. ವಿಜಯಪ್ರಸಾದ್, ಡಿ.ವೈ.ಎಸ್.ಪಿ. ಬಂಟ್ವಾಳ ರವರ ನೇತೃತ್ವದ, ಹರೀಶ್ ಎಂ.ಆರ್, ಪಿ.ಎಸ್. ಐ. ಬಂಟ್ವಾಳ ಗ್ರಾಮಾಂತರ ಠಾಣೆರವರ ವಿಶೇಷ ಪತ್ತೆ ತಂಡವನ್ನು ರಚಿಸಿರುತ್ತಾರೆ. ತನಿಖಾ ತಂಡದಲ್ಲಿ ಹೆಚ್ ಸಿ ಹರಿಶ್ಚಂದ್ರ , ಹೆಚ್ ಸಿ ರಾಧಾಕೃಷ್ಣ, ಪಿಸಿಗಳಾದ ಬಸವರಾಜ ಎಚ್ ,ಕೆ, ಕುಮಾರ್ ಎಚ್,ಕೆ, ಅಶೋಕ ಮತ್ತು ರಂಜಾನ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ.

Related posts

ಕಡಿರುದ್ಯಾವರ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಓಮ್ನಿ ಕಾರು

Suddi Udaya

ಮೋಗೇರೋಡಿ ಕನ್ಸ್ಟ್ರಕ್ಷನ್ ನೆವದಿಂದ ನಾಳೆಯಿಂದ ಕಾಮಗಾರಿ ಆರಂಭ

Suddi Udaya

ದ.ಕ ಲೋಕಸಭಾ ಚುನಾವಣೆ: ವೀಕ್ಷಕರಾಗಿ ಹರೀಶ್ ಕುಮಾರ್ ನೇಮಕ

Suddi Udaya

ಉಜಿರೆಯಲ್ಲಿ ಡಾ| ಸೂರಜ್ ರವರ ಡೆಂಟಲ್ ಕ್ಲಿನಿಕ್ ಶುಭಾರಂಭ

Suddi Udaya

ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ತೆಕ್ಕಾರು ಉಪ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಮನವಿ

Suddi Udaya
error: Content is protected !!