ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ನಯನಾಡು ಸ.ಪ್ರೌ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ನಯನಾಡು: ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟವು ಅ.3 ಮತ್ತು 4ರಂದು ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆಯಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ನಯನಾಡು ಇಲ್ಲಿಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮೆರೆದು 17ರ ಹರೆಯದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.
೧೪ರ ಹರೆಯದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕೂಡ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.


ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ 100 ಮೀಟರ್, 200 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಅದ್ವಿತೀಯ ಸಾಧನೆ ಮೆರೆದು ಕೂಟದ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾಳೆ.
4×100 ಮತ್ತು 4×400 ಎರಡೂ ವಿಭಾಗದ ರಿಲೇ ಓಟದಲ್ಲಿ ಶ್ರಾವ್ಯ, ರಕ್ಷಿತಾ, ಶಮಿತ ಮತ್ತು ಅನುಷಾ ಅವರನ್ನು ಒಳಗೊಂಡ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.


14ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಬಾಲಕಿಯರ ತಂಡ ಕೂಟದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 14ರ ಹರೆಯದ ಯಶ್ವಿತಾ, ಸ್ಪರ್ಷ, ಸಂಜನಾ, ಮತ್ತು ಚೇತನಾ ಒಳಗೊಂಡ ಪ್ರೌಢಶಾಲಾ ಬಾಲಕಿಯರ ತಂಡ, 4×100 ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದೆ.


4×400 ಮೀಟರ್ ರಿಲೇ ಓಟದ 17 ರ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ. 3000 ಮೀಟರ್ ಓಟದಲ್ಲಿ ತನುಶ್ರೀ ಪ್ರಥಮ ಸ್ಥಾನ, ಮತ್ತು ಗಣ್ಯ ದ್ವಿತೀಯ ಸ್ಥಾನ, 1500 ಮೀಟರ್ ಓಟದಲ್ಲಿ ತನುಶ್ರೀ ದ್ವಿತೀಯ ಮತ್ತು ಶ್ರೇಯ ತೃತೀಯ ಸ್ಥಾನ, 1500 ಮೀಟರ್ ಓಟದಲ್ಲಿ ಬಾಲಕರ ವಿಭಾಗದಲ್ಲಿ ಹರ್ಷ್ ದ್ವಿತೀಯ ಸ್ಥಾನ, ೩೦೦೦ ಮೀಟರ್ ಓಟದಲ್ಲಿ ಸೃಜನ್ ದ್ವಿತೀಯ ಸ್ಥಾನ, 100 ಮೀಟರ್ ವೇಗದ ಓಟದಲ್ಲಿ ಶ್ರಾವ್ಯ ಪ್ರಥಮ ಸ್ಥಾನ, 200 ಮೀಟರ್ ಓಟದಲ್ಲಿ ಶ್ರಾವ್ಯ ಪ್ರಥಮ ಸ್ಥಾನ, 3mtr ನಡಿಗೆಯಲ್ಲಿ ಅನುಷಾ ದ್ವಿತೀಯ ಸ್ಥಾನ.
17ರ ಹರೆಯದ ಬಾಲಕಿಯರ ಉದ್ದ ಜಿಗಿತದಲ್ಲಿ ರಕ್ಷಿತಾ ಪ್ರಥಮ ಸ್ಥಾನ, ತನುಶ್ರೀ ದ್ವಿತೀಯ ಸ್ಥಾನ.
100 ಮೀಟರ್ ಹರ್ಡಲ್ಸ್ 17ರ ಹರೆಯದ ಬಾಲಕಿಯರ ವಿಭಾಗದಲ್ಲಿ ಯಶ್ವಿತಾ ಪ್ರಥಮ ಸ್ಥಾನ, ಪ್ರತಿಜ್ಞಾ ದ್ವಿತೀಯ ಸ್ಥಾನ, ೧೭ರ ಹರೆಯದ ಬಾಲಕಿಯರ 4×100 ಮೀಟರ್ ಹರ್ಡಲ್ಸ್‌ನಲ್ಲಿ ಪ್ರತಿಜ್ಞಾ ಪ್ರಥಮ, ಯಶ್ವಿತಾ ದ್ವಿತೀಯ.
14ರ ಹರೆಯದ ಬಾಲಕಿಯರ ಎತ್ತರ ಜಿಗಿತದಲ್ಲಿ ಯಶ್ವಿತಾ ಪ್ರಥಮ ಸ್ಥಾನ. 14ರ ಹರೆಯದ ಬಾಲಕಿಯರ ೨೦೦ ಮೀಟರ್ ಓಟದಲ್ಲಿ ಯಶ್ವಿತಾ ದ್ವಿತೀಯ ಸ್ಥಾನ. 400 ಮೀಟರ್ ಓಟದಲ್ಲಿ ಶ್ರಾವ್ಯ ಪ್ರಥಮ ಸ್ಥಾನ.
೬೦೦ ಮೀಟರ್ ಓಟದಲಿ 14 ರ ಬಾಲಕಿಯರ ವಿಭಾಗದಲ್ಲಿ ಸಂಜನಾ ಲಾರೆನ್ಸ್ ತೃತೀಯ. 17ರ ಹರೆಯದ 100 ಮೀಟರ್ ವೇಗದ ಓಟದಲ್ಲಿ ಶಮಿತ ತೃತೀಯ. 17ರ ಹರೆಯದ 200 ಮೀಟರ್ ಓಟದಲ್ಲಿ ಶಮಿತ ದ್ವಿತೀಯ. ೧೪ರ ಹರೆಯದ ಬಾಲಕಿಯರ ಹರ್ಡಲ್ಸ್ ನಲ್ಲಿ ಸಂಜನಾ ಲಾರೆನ್ಸ್ ದ್ವಿತೀಯ. ೪೦೦ ಮೀಟರ್ ಓಟದಲ್ಲಿ ಶ್ರವಣ್ ತೃತೀಯ.
400 ಮೀಟರ್ ಓಟದಲ್ಲಿ ೧೪ರ ಬಾಲಕಿಯರ ವಿಭಾಗದಲ್ಲಿ ಚೇತನಾ ತೃತೀಯ. ೧೪ರ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ತಶ್ರೀಫಾ ಬಾನು ತೃತೀಯ.
೧೭ರ ಬಾಲಕಿಯರ ೪೦೦ ಮೀಟರ್ ಓಟದಲ್ಲಿ ರಕ್ಷಿತಾ ದ್ವಿತೀಯ. ೧೭ರ ಬಾಲಕಿಯರ ವಿಭಾಗದ ಉದ್ದ ಜಿಗಿತದಲ್ಲಿ ರಫೀಝ ತೃತೀಯ. ೧೭ರ ಬಾಲಕಿಯರ ಹ್ಯಾಮರ್ ಥ್ರೋದಲ್ಲಿ ರೆಲ್ ರಿಶಾ ರೊಡ್ರಿಗಸ್ ತೃತೀಯ. ೧೭ರ ಹರೆಯದ ೮೦೦ ಮೀಟರ್ ಓಟದಲ್ಲಿ ಅನುಷಾ ದ್ವಿತೀಯ ಸ್ಥಾನ ಪಡೆದಿದ್ದಾರೆ.


ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಕನ್ಯಾರತ್ನ ಹಾಗೂ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದ್ದರು. ಶಾಲಾ ಮುಖ್ಯಶಿಕ್ಷಕರಾದ ಜೋಯಲ್ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Leave a Comment

error: Content is protected !!