24.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorized

ಹೊಸ್ಮರ್ ವಲಯದ ಈದು ಒಕ್ಕೂಟದ ಶ್ರೀ ರಾಜಶ್ರೀ ಸ್ವಸಹಾಯ ಸಂಘದ 20 ನೇ ವರ್ಷದ ಸಂಭ್ರಮಾಚಾರಣೆ

ಈದು : ಪಶ್ಚಿಮ ಘಟ್ಟದ ತಪ್ಪಲಿನಲ್ಲಿನ ತೀರ ಹಿಂದುಳಿದ ಪ್ರದೇಶವಾದ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆರಂಭವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರ್ಕಳ ಇವರ ಸಹಾಕರದೊಂದಿಗೆ ಹೊಸ್ಮಾರ್‌ ವಲಯದ ಕಳೆದ 20 ವರ್ಷ ಹಿಂದೆ ಸಮಾನ ಮನಸ್ಕರರಾದ 12ಜನ ಒಟ್ಟು ಸೇರಿ ಸೆ.28 , 2004ರಂದು ಈದು ಮುಗೇರಡ್ಕ ಭಾಗ್ಯಶ್ರೀ ನಿವಾಸದಲ್ಲಿ ಒಟ್ಟು ಸೇರಿ ರಾಜಶ್ರೀ ಸ್ವ ಸಹಾಯ ಸಂಘವನ್ನು ಆರಂಭಿಸಿ ಇಂದಿಗೆ 20 ವರ್ಷಗಳ ಸಾರ್ಥಕವಾಗಿ ನಡೆಸಿ ಈ ಭಾಗ ಇತರ ಸ್ವ ಸಹಾಯ ಸಂಘಗಳಿಗೆ ಮಾದರಿಯಾಗಿದ್ದೀರಿ ಕುಟುಂಬದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಮ್ಮ ಸಂಘದ ಮಹತ್ವದ ಪಾತ್ರ ವಹಿಸಿದೆ ಎನ್ನುವುದನ್ನು ಈ ಸಂಭ್ರಮಾಚಾರಣೆಯ ವ್ಯವಸ್ಥೆಯಲ್ಲಿ ನಾವು ಕಾಣಬಹುದು ಎಂದು ಮೂಡಬಿದ್ರಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾ ನಾಯಕ್‌ ಅಭಿಪ್ರಾಯ ಪಟ್ಟರು.

ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರ್ಕಳ . ಹೊಸ್ಮರ್ ವಲಯದ ಈದು ಒಕ್ಕೂಟದ ಶ್ರೀ ರಾಜಶ್ರೀ ಸ್ವಸಹಾಯ ಸಂಘದ 20 ನೇ ವರ್ಷದ ಸಂಭ್ರಮಾಚಾರಣೆ ಯನ್ನು ಈದು ಮುಗೇರಡ್ಕ ಭಾಗ್ಯಶ್ರೀ ನಿವಾಸದಲ್ಲಿ ಜ್ಯೋತಿ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಸಂಘದ ರಚನೆಯಾದ ಸಮಯದ ವಿಚಾರಗಳನ್ನು ಮೆಲುಕು ಹಾಕಿಕೊಂಡು ಮುಂದೆಯೂ ಸಂಘ ಅತ್ಯುತ್ತಮ ರೀತಿಯಲ್ಲಿ ನಡೆಸಿಕೊಂಡು ಮುಂದುವರೆಯಿರಿ ಎಂದು ಹೇಳಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ಯೋಜನಾಧಿಕಾರಿಗಳಾದ ಶ್ರೀಮತಿ ಹೇಮಲತಾರವರು ಮಾತನಾಡಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿ, ತಮ್ಮ ಇಂದಿನ ಕಾರ್ಯಕ್ರಮ ಇತರರೂ ಅನುಸರಿಸುವಂಹದ್ದು ಎಂದರು. ನಿಮ್ಮ ಸಂಘದ ಮುಂದಿನ ಎಲ್ಲಾ ಕಾರ್ಯಗಳು ಯಶಶ್ವಿಯಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ರಾಜಶ್ರೀ ಸ್ವ ಸಹಾಯದ ಸಂಘದ 20ನೇ ವರ್ಷದ ಸವಿ ನೆನಪಿಗಾಗಿ ಹೊಸ್ಮಾರ ವಲಯದ ಈದು ಎ ಒಕ್ಕೂಟಕ್ಕೆ ದೇವರ ಪೋಟೋ ಇಡುವ ಮರ ಪೀಠವನ್ನು ನೀಡಲಾಯಿತು.
ಈದು ಸತ್ಯನಾರಾಯಣ ಪೂಜಾ ಸಮೀತಿ ಅಧ್ಯಕ್ಷರು ಪ್ರವೀಣ್ ಮೂಲ್ಯ ಮಾತನಾಡಿ ರವರು ಇವತ್ತಿನ ಕಾರ್ಯಕ್ರಮ ಅದ್ಭುತ ಕಾರ್ಯಕ್ರಮ ಈ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆ ಆಗಲಿ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸದಸ್ಯರು ನಿಕಟ ಪೂರ್ವ ಅಧ್ಯಕ್ಷರು ನಾರಾಯಣ ದೇವಾಡಿಗ ವಹಿಸಿದ್ದು ರಾಜಶ್ರೀ ಸಂಘದ ಸರ್ವ ಸದಸ್ಯರಿಗೆ ಶುಭ ಹಾರೈಸಿದರು….
ಈ ಸಂದರ್ಭದಲ್ಲಿ ರಾಜಶ್ರೀ ಸಂಘದ ಸದಸ್ಯರ ಪರವಾಗಿ ರವಿ ದೇವಾಡಿಗ ರವರು ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರು ಕರಿಯ, ವಲಯ ಮೇಲ್ವಿಚಾರಕ ಶ್ರೀ ಮನೋಜ್ ಹೆಗ್ಡೆ, ಸಂಘ ಆರಂಭದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಸ್ತವಿಕದೊಂದಿಗೆ ನಿಕಟ ಪೂರ್ವ ಒಕ್ಕೂಟ ಅಧ್ಯಕ್ಷರು ರಾಜಶ್ರೀ ಸಂಘದ ಸದಸ್ಯರಾದ ಅನ್ವರ್ ರವರು ಸ್ವಾಗತಿಸಿದರು. ರಾಜಶ್ರೀ ಸಂಘದ ಸದಸ್ಯರಾದ ಶ್ರೀಮತಿ ಸುನೀತ ಅವರು ವರದಿವಚನ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೇವಾಪ್ರತಿನಿಧಿ ಶ್ರೀಮತಿ ಪುಷ್ಪ ಹಾಗೂ ಶ್ರೀ ಸುಧೀರ್ ನಿರ್ವಹಿಸಿದರು. ವಂದನಾರ್ಪಣೆಯನ್ನು ರಾಜಶ್ರೀ ಸಂಘದ ಸದಸ್ಯರಾದ ವಾಸು ನೇರವೇರಿಸಿದರು. ಈ ಸಂದರ್ಭದಲ್ಲಿ ರಾಜಶ್ರೀ ಸಂಘದ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.

Related posts

ಭಾರೀ ಮಳೆಯಿಂದಾಗಿ ಹದಗೆಟ್ಟ ರಸ್ತೆ : ಸೋಮಂತ್ತಡ್ಕದಲ್ಲಿ ಗಂಟೆಗಟ್ಟಲ್ಲೇ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

Suddi Udaya

ಭಾರಿ ಗಾಳಿ ಮಳೆ: ಮುಂಡ್ರುಪ್ಪಾಡಿ ಶಾಲೆತಡ್ಕ ರಾಮಣ್ಣ ಗೌಡರವರ ಮನೆ ಹಾಗೂ ಕೊಟ್ಟಿಗೆಗೆ ಹಾನಿ

Suddi Udaya

ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ

Suddi Udaya

ಬರೆಂಗಾಯ ಭೂತಳಗುಡ್ಡೆ ನಿವಾಸಿ ರವೀಂದ್ರ ರಾವ್ ನಿಧನ

Suddi Udaya

ನಮ್ಮ ನಡೆ ಮತಗಟ್ಟೆ ಕಡೆ ಮತದಾರರ ಜಾಗೃತಿ ಆಂದೋಲನ

Suddi Udaya

ಕೊಯ್ಯೂರು ಸ .ಹಿ ಪ್ರಾ. ಶಾಲೆ ಮತ್ತು ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

Suddi Udaya
error: Content is protected !!