29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿ

ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವನ್ನು ರಕ್ಷಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ

ಬೆಳ್ತಂಗಡಿ; ಜಾನುವಾರು ಕಟ್ಟಿ ಹೋಗಿದ್ದಲ್ಲಿ ಅದರ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವೊಂದನ್ನು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಕಾಲಿಕವಾಗಿ ಸ್ಪಂದಿಸಿ ರಕ್ಷಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪೆರಣಮಂಜ ಸ್ಥಳದ ರಸ್ತೆ ಬದಿಯಲ್ಲಿ ಯಾರೋ ಮೇಯಲು ಕಟ್ಟಿ ಹೋಗಿದ್ದ ಹಸು ವಿನ ಕುತ್ತಿಗೆಗೆ ಹಾಕಲಾಗಿದ್ದ ಹಗ್ಗ ಬಿಗಿಯಾಗಿ ಜಾನುವಾರು ಅಂಗಾತ ಬಿದ್ದಿತ್ತು. ಕೈಕಾಲುಗಳನ್ನು ಅಲ್ಲಾಡಿಸಿ ಮೇಲೇಳಲು ಭಾರೀ ಪ್ರಯತ್ನ ಪಟ್ಟು ಕೊನೆಗೆ ಬಸವಳಿದಿತ್ತು. ಇದೇ ರಸ್ತೆಯ ಮೂಲಕ ಹೋಗುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಟ್ಲಾಜೆ ಇದರ ಸದಸ್ಯ ಪ್ರಮೋದ್ ಪೂಜಾರಿ ತೂಪಲ್ಕೆ- ಬಳೆಂಜ ಅವರು ಹಸುವಿನ ಪ್ರಾಣ ಉಳಿಸಿದ್ದಾರೆ. ಇದೇ ವೇಳೆ ಬಂದ ಇನ್ನಿಬ್ಬರು ದ್ವಿಚಕ್ರ ವಾಹನ ಸವಾರರು ಅವರಿಗೆ ಸಾತ್ ನೀಡಿದ್ದಾರೆ. ಪ್ರಮೋದ್ ಅವರ ಈ‌ ಸೇವೆಯ ವೀಡಿಯೋ ಹರಿದಾಡುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

Related posts

ಕೊಲ್ಪಾಡಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ 9ನೇ ಸಹಾಯಧನ ಹಸ್ತಾಂತರ

Suddi Udaya

ಮರೋಡಿ ಗ್ರಾಮ ಪಂಚಾಯತ್ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಶುಭವಿವಾಹ:ಗಿರೀಶ್ ಬಿ.ಕೆ ಮತ್ತು ಧನ್ಯಶ್ರೀ

Suddi Udaya

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ರಕ್ಷಿತ್ ಶಿವರಾಂ ಕೈ ಬಲ ಪಡಿಸಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ

Suddi Udaya

ನಿಡ್ಲೆ : ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರ ಬಿದ್ದು ವ್ಯಕ್ತಿ ಸಾವು

Suddi Udaya
error: Content is protected !!