ಕೊಕ್ಕಡ :ಪುರಾತನ ಕಾಲದಿಂದಲೂ ಭಾರತವು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ತನ್ನ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು ಸರಕಾರದ ಆಡಳಿತಕ್ಕೆ ಒಳಪಟ್ಟವು. ಸರಕಾರವು ಸರ್ವ ಜಾತಿ ಧರ್ಮಗಳ ಒಳಗೊಳ್ಳುವಿಕೆಯಿಂದ ಆಯ್ಕೆಗೊಳಿಸಲ್ಪಡುವ ಸಂಸ್ಥೆಯಾಗಿದೆ. ಹಿಂದೂ ದೇವಾಲಯಗಳು ಮತ್ತು ಅದರ ಸ್ವತ್ತುಗಳು ಜಾತ್ಯತೀತ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲ್ಪಟ್ಟಿದೆ.
ಇದರಿಂದಾಗಿ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಹಿಂದೂ ಧಾರ್ಮಿಕ ಚಟುವಟಿಕೆಗಳು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ವೈವಿಧ್ಯತೆಯನ್ನು ಹೊಂದಿದೆ. ಹಿಂದೂ ಧಾರ್ಮಿಕ ನಂಬಿಕೆ ವೈವಿಧ್ಯತೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಹಾಗೂ ಪ್ರಸಾರಕ್ಕಾಗಿ ದೇವಾಲಯಗಳನ್ನು ಸರಕಾರದ ಕಪಿಮುಷ್ಠಿಯಿಂದ ಹೊರ ತರುವುದು ಅನಿವಾರ್ಯವಾಗಿದೆ. ಅಲ್ಲದೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಚುನಾಯಿತ ಸರಕಾರ ವ್ಯಾಪಾರ ಕೇಂದ್ರಗಳಂತೆ ನಡೆಸುತ್ತಿರುವುದು ಹಿಂದೂಗಳ ಮನಸ್ಸಿಗೆ ಘಾಸಿಯನ್ನುಟುಮಾಡಿದೆ ಮಾಡಿದೆ.
ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ
ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ (ಎ ಗ್ರೇಡ್ ಬಿ ಗ್ರೇಡ್ ಹಾಗೂ ಸಿ ಗ್ರೇಡ್ ) ದೇವಾಲಯಗಳನ್ನು ಸರಕಾರದ ಹಿಡಿತದಿಂದ ವಿಮುಕ್ತಿಗೊಳಿಸಲು ಹಾಗೂ ಹಿಂದೂ ಸ್ವಾಯತ್ತೆ ಮಂಡಳಿಯನ್ನು ರಚಿಸಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಹಿಂದಿರುಗಿಸಬೇಕೆಂದು ನಾಡಿನ ಸುಪ್ರಸಿದ್ಧ ದೇವಾಲಯವಾದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ. ದಿನಾಂಕ 6 ಅಕ್ಟೋಬರ್ 2024 ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 7ರ ತನಕ ಉಪವಾಸ ಸತ್ಯಾಗ್ರಹ ನಡೆಯಲಿದೆ.
ಉಪವಾಸ ಸತ್ಯಾಗ್ರಹದ ಯನ್ನು ಆರ್ ಎಸ್ ಎಸ್ ಮುಖಂಡ ಕೃಷ್ಣ ಭಟ್ ಹಾಗೂ ಡಾ. ಮೋಹನ್ ದಾಸ್ ಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾ ಶ್ರಮ ಟ್ರಸ್ಟ್ ಕಳೆ0ಜ ಇದರ ಅಧ್ಯಕ್ಷರಾದ ಡಾ. ಎಂಎಂ ದಯಾಕರ್. ವಿಶ್ವ ಹಿಂದೂ ಪರಿಷತ್ ಸಂಚಾಲಕ ನವೀನ್ ನೆ ರಿಯ. ಉದ್ಯಮಿ ಬಾಲಕೃಷ್ಣ ನೈಮಿಷ . ಪ್ರಕಾಶ್ ಚಾರ್ಮಾಡಿ ಸೌತಡ್ಕ ದೇವಸ್ಥಾನದ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ರಾವ್. ಮಾಜಿಸದಸ್ಯ ಪುರಂದರ ಗೌಡ ಪ್ರಶಾಂತ್ ಗೌಡ ಪೂವಾಜೆ . ವಿವಿಧ ಭಜನಾ ಮಂಡಳಿ ದೇವಸ್ಥಾನಗಳ ಸದಸ್ಯರು ಆಗಮಿಸಿ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.