24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

ಮುಂಡಾಜೆ : “ಉತ್ತಮ ಓದುಗನಾದರೆ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದು. ಪತ್ರಿಕಾ ಕ್ಷೇತ್ರದಲ್ಲಿ ಮೈಮರೆಯದೆ ಜಾಗೃತರಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು” ಎಂದು ಪ್ರಜಾವಾಣಿಯ ಉಪಸಂಪಾದಕ ರೇವಣ್ಣ ಎಂ ಅಭಿಪ್ರಾಯಪಟ್ಟರು.

ಅವರು ಮುಂಡಾಜೆ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಮಾಧ್ಯಮ ಕ್ಷೇತ್ರದ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಂಜೀವ ಗೌಡ ಮಾಕಳರು, ವಹಿಸಿದ್ದರು. ಅತಿಥಿಗಳಾಗಿ ಜತ್ತನ್ನ ಗೌಡ, ನಿವೃತ ಬಿ.ಎಸ್.ಎನ್.ಎಲ್, ಉದ್ಯೋಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಬಿರ ನಿರ್ವಹಣಾ ಸಮಿತಿಯ ಅಧ್ಯಕ್ಷ ಸೋಮನಾಥ ಗೌಡ ಮಾಕಳ ಉಪಸ್ಥಿತರಿದ್ದರು. ಶಿಬಿರಾರ್ಥಿ ಲತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರಾಧಿಕಾರಿ ಶ್ರೀಮತಿ ನಮಿತಾ ಕೆ.ಆರ್ ಸ್ವಾಗತಿಸಿ, ಅಕ್ಷಯ ಧನ್ಯಾವಾದಗೈದರು.

Related posts

ನಡ ಗ್ರಾ.ಪಂ ಸದಸ್ಯೆಯಿಂದ ರಸ್ತೆ ದುರಸ್ತಿ ಕಾರ್ಯ

Suddi Udaya

ಮೇಲಂತಬೆಟ್ಟು: ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

Suddi Udaya

ವಸಂತ ಬಂಗೇರ ನಿಧನಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ

Suddi Udaya

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಇಳ0ತಿಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಸುರೇಶ್ ಗೌಡ ಆಯ್ಕೆ

Suddi Udaya
error: Content is protected !!