ನಡ: ನಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಮಾಹಿತಿ ಶಿಬಿರವು ಅ.5ರಂದು ನಡ ಸಮಾಜ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಡ ಹಾ.ಉ.ಸ. ಸಂಘದ ಅಧ್ಯಕ್ಷ ಜರ್ನಾದನ ಗೌಡ ವಹಿಸಿದರು.
ಮುಖ್ಯ ಅತಿಥಿಗಳಾಗಿ ಕೆ.ಎಮ್.ಎಫ್ ಉಪವ್ಯವಸ್ಥಾಪಕ ಸತೀಶ್ ರಾವ್, ಕೆ.ಎಮ್.ಎಫ್ ಸಹಾಯಕ ವ್ಯವಸ್ಥಾಪಕ, ಪಶು ವೈದ್ಯಾಧಿಕಾರಿ ಡಾ| ಗಣಪತಿ, ಕೆ.ಎಂ.ಎಫ್ ಕೃಷಿ ಅಧಿಕಾರಿ ಡಾ. ನಿರಂಜನ್, ಕೆ.ಎಮ್.ಎಫ್ ವಿಸ್ತರಣಾಧಿಕಾರಿಯಾದ ಯಮುನ, ಸುಚಿತ್ರಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದೇಶಕ್ಕೆ ಹೊಂದಿಕೊಳ್ಳುವ ಹಸಿರು ಮೇವಿನ ತಳಿಗಳ ಬಗ್ಗೆ ಹಾಗೂ ಸೈಲೇಜ್ / ರಸ ಮೇವು ಉಪಯೋಗದ ಬಗ್ಗೆ ಮಾಹಿತಿ., ಜಾನುವಾರುಗಳ ಗರ್ಭಧಾರಣೆ ಸಮಸ್ಯೆಯ ಬಗ್ಗೆ, ಜಾನುವಾರುಗಳ ವಿಮೆ (ಇನ್ಶೂರೆನ್ಸ್) ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಸಂಘದ ವತಿಯಿಂದ ಹಾಲು ಹಾಕುವ ಸದಸ್ಯರ ಒಂದು ದನಕ್ಕೆ ಉಚಿತವಾಗಿ ವಿಮೆಯನ್ನು ಮಾಡಲಾಯಿತು.
ಸಂಘದಲ್ಲಿ 200ಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ಸಂಘದ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.
ಯತೀಶ್ ಗೌಡ ಕಂಗಿತ್ತೀಲು ಸ್ವಾಗತಿಸಿ, ಅಜಿತ್ ಕುಮಾರ್ ಅರಿಗ ಪ್ರಸ್ತಾವಿಕ ಮಾತನಾಡಿದರು., ಜಯಂತ್ ಗೌಡ ಧನ್ಯವಾದವಿತ್ತರು.