ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸಮರ ಸನ್ನಾಹ ತಾಳಮದ್ದಳೆ

Suddi Udaya

ಮಡಂತ್ಯಾರು : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಸಹಯೋಗದಲ್ಲಿ 50ನೇ ವರ್ಷದ ನಿಮಿತ್ತ ಶ್ರೀ ಮಹಾಭಾರತ ಸರಣಿಯಲ್ಲಿ 49ನೇ ಕಾರ್ಯಕ್ರಮವಾಗಿ ಭೀಮ -ದ್ರೌಪದಿ ಸಮರ ಸನ್ನಾಹ, ತಾಳಮದ್ದಳೆ ಜರಗಿತು.


ಭಾಗವತರಾಗಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಹರೀಶ ಆಚಾರ್ಯ ಉಪ್ಪಿನಂಗಡಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ಉಪ್ಪಿನಂಗಡಿ , ಜಗದೀಶ ಚಾರ್ಮಾಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ದ್ರೌಪದಿ ), ದಿವಾಕರ ಆಚಾರ್ಯ ಗೇರುಕಟ್ಟೆ, ಹರೀಶ ಆಚಾರ್ಯ ಬಾರ್ಯ(ಶ್ರೀ ಕೃಷ್ಣ ), ಜಯರಾಮ ಬಲ್ಯ(ಭೀಮ ), ಸಂಜೀವ ಪಾರೆಂಕಿ(ಧರ್ಮರಾಯ), ಶ್ರೀಮತಿ ಶ್ರುತಿ ವಿಸ್ಮಿತ್ ಬಲ್ನಾಡು(ಸಹದೇವ,ಅರ್ಜುನ )ರಾಗಿ ಭಾಗವಹಿಸಿದ್ದರು.

ಕಳಿಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರನ್ನ, ಕಚೇರಿ ವ್ಯವಸ್ಥಾಪಕ ಗಿರೀಶ್ ಶೆಟ್ಟಿ, ವಿಠ್ಠಲಶೆಟ್ಟಿ ಉಪ್ಪಡ್ಕ ಉಪಸ್ಥಿತರಿದ್ದರು.


ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ. ಎಚ್.ಗೇರುಕಟ್ಟೆ ಸ್ವಾಗತಿಸಿ,ದೇವಳ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ವಂದಿಸಿದರು.

Leave a Comment

error: Content is protected !!