April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಚಿನ್ನೋತ್ಸವ ಪ್ರಾರಂಭ: 20 ಸಾವಿರದ ಡೈಮಂಡ್ ಖರೀದಿಗೆ 5 ಕಾರು ಗೆಲ್ಲುವ ಸುವರ್ಣಾವಕಾಶ

ಬೆಳ್ತಂಗಡಿ: ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ವರ್ಷಕ್ಕೆ 2 ಬಾರಿ ಚಿನ್ನೋತ್ಸವ ಪ್ರಾರಂಭಿಸುತ್ತೇವೆ. ಬೆಳ್ತಂಗಡಿ ಚಿನ್ನದಂತ ಊರು. ಮುಳಿಯ ಸಂಸ್ಥೆ ಆರು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಪ್ರಾರಂಭಗೊಂಡಾಗ ನಮ್ಮನ್ನು ಅತ್ಯಂತ ಗೌರವದಿಂದ ಕಂಡ ಊರು.‌ ಇಲ್ಲಿಯ ಜನರು ಅತ್ಯಂತ ಸಾತ್ವಿಕ ಮನಸ್ಸಿನವರು ಎಂದು ಮುಳಿಯ ಮಾರ್ಕೇಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಹೇಳಿದರು.

ಅವರು ಬೆಳ್ತಂಗಡಿ ಮುಳಿಯ ಚಿನ್ನೋತ್ಸವಕ್ಕೆ ಅ.7 ರಂದು ಚಾಲನೆ ನೀಡಿ ಮಾತನಾಡಿದರು.

80 ವರ್ಷಗಳ ಪರಂಪರೆಯಲ್ಲಿ ಮುಳಿಯ ಚಿನ್ನಾಭರಣಗಳಲ್ಲಿ ಶುದ್ಧತೆಯನ್ನು ಕಾಪಾಡಿಗೊಂಡು ಬಂದಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಂಸ್ಥೆ ಎತ್ತರಕ್ಕೆ ಬೆಳೆದಿದೆ. ವಿನೂತನ ಮತ್ತು ವಿಶಿಷ್ಠವಾದ ಡಿಸೈನ್ ನಮ್ಮಲ್ಲಿದ್ದು ಗ್ರಾಹಕರು ತಮ್ಮ ಇಷ್ಟದ ಚಿನ್ನಾಭರಣ ಪಡೆಯಬಹುದು ಎಂದರು.

ತಾ.ಪಂ‌ ತರಭೇತಿ ಸಂಯೋಜಕಿ, ಸಂಪನ್ಮೂಲ ವ್ಯಕ್ತಿ ಸುಧಾಮಣಿ ಮಾತನಾಡಿ ಮುಳಿಯದಲ್ಲಿ ಮನೆಯ ವಾತವರಣ ಕಂಡಿದ್ದೇವೆ. ಇಲ್ಲಿ ಬರುವಾಗ ನಗುಮೊಗದ ಸೇವೆಯೊಂದಿಗೆ ಸ್ವಾಗತಿಸಿ ಸತ್ಕಾರ ನೀಡುವುದು ಬಹಳ ಅದ್ಬುತವಾಗಿದೆ. ಎಲ್ಲಿಯೂ ಸಿಗದ ಡಿಸೈನ್ ಮುಳಿಯದಲ್ಲಿ ಸಿಗುತ್ತದೆ. ಹೆಣ್ಮಕ್ಕಳಿಗೆ ಚಿನ್ನ ಇಷ್ಟ, ಸ್ಕೀಮ್ ಮಾಡಿದ್ದು ಗ್ರಾಹಕರಿಗೆ ಪ್ರಯೋಜನವಾಗಿದೆ. ಸಂಸ್ಥೆ ವ್ಯಾಪರದೊಂದಿಗೆ ಧಾರ್ಮಿಕ ಆಚರಣೆಗಳನ್ನು ಆಚರಿಸಿ, ಸಮಾಜಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದೆ. ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮುಳಿಯ ಅಂತರಾಷ್ಟ್ರೀಯ ಮಟ್ಟದಲ್ಲಿ‌ ಬೆಳೆಯಲಿ ಎಂದರು.

ಮೂಡಬಿದ್ರೆ ಜೈನ್ ಕಾಲೇಜಿನ ಶಾರ್ವರಿ ಜೈನ್ ಮಾತನಾಡಿ ಮುಳಿಯ ಸಿಬ್ಬಂದಿಗಳ ಸೇವೆ ಅದ್ಬುತವಾಗಿದೆ. ಎಲ್ಲಾ ಹಬ್ಬಗಳನ್ನು ಆಚರಿಸಿ ಸಂಸ್ಥೆಯು ಮಾದರಿಯಾಗಿದೆ. ಚಿನ್ನಾಭರಣದಲ್ಲಿ ತುಂಬ ಕಲೆಕ್ಷನ್ ಇದ್ದು ಗ್ರಾಹಕರು ಚಿನ್ನೋತ್ಸವದಲ್ಲಿ ಭಾಗವಹಿಸಿ ಎಂದರು.

ವೇದಿಕೆಯಲ್ಲಿ ಮುಳಿಯ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕುಮಾರ್ ಉಪಸ್ಥಿತರಿದ್ದರು. ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ಮ್ಯಾನೇಜರ್ ಲೋಹಿತ್ ಕುಮಾರ್ ಸ್ವಾಗತಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಮುಳಿಯದ ಉಪ ವ್ಯವಸ್ಥಾಪಕ ದಿನೇಶ್ ವಂದಿಸಿದರು.


ಮದುವೆ, ಉಪನಯನ, ಗೃಹಪ್ರವೇಶ, ಮಗುವಿನ ನಾಮಕರಣ ಇತ್ಯಾದಿ ಸಮಾರಂಭಗಳಲ್ಲಿ ನಿಮ್ಮ ಸಂಭ್ರಮವನ್ನು ಹೆಚ್ಚಿಸಲು ಮುಳಿಯ ಜ್ಯುವೆಲ್ಸ್‌ನ ಚಿನ್ನೊತ್ಸವ ಹಬ್ಬದಲ್ಲಿ ಭಾಗವಹಿಸಿ ನೆಚ್ಚಿನ ಆಭರಣಗಳನ್ನು ಆಕರ್ಷಕ ಬೆಲೆಗಳಲ್ಲಿ ಪಡೆಯಬಹುದಾಗಿದೆ.

5 ಕಾರು ಗೆಲ್ಲುವ ಸುವರ್ಣವಕಾಶ:

ಮುಳಿಯ ಜ್ಯುವೆಲ್ಸ್‌ನಲ್ಲಿ ನಿಮ್ಮ ಆಯ್ಕೆಯ ಚಿನ್ನಾಭರಣ ಹಾಗೂ ಡೈಮಂಡ್ ಖರೀದಿಸಿ ಸಂಭ್ರಮಿಸಲು ಅವಕಾಶವಿದೆ. ರೂ. 20 ಸಾವಿರ ಮೊತ್ತದ ಡೈಮಂಡ್ ಆಭರಣ ಖರೀದಿಸಿ, ಕೂಪನ್ ಪಡೆದು 5 ಕಾರು ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಿದೆ.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷೆಗಾಗಿ ಸೀಯಾಳ ಅಭಿಷೇಕ

Suddi Udaya

ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಹಣ್ಣು ಹಂಪಲು ಗಿಡ ವಿತರಣೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜು ವಿದ್ಯಾರ್ಥಿ ಸಂಘ ರಚನೆ

Suddi Udaya

ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಸಂಯುಕ್ತ ಜಮಾಅತ್ ಖಾಝಿ ಸ್ವೀಕಾರ ವಿಚಾರ- ಬೆಳ್ತಂಗಡಿ ಸಮುದಾಯ ಮುಖಂಡರಿಂದ ಸಮಾಲೋಚನಾ ಸಭೆ: ಕಾಜೂರು‌ ತಂಙಳ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವಂತೆ ಆಗ್ರಹ

Suddi Udaya

ಶಿಬಾಜೆ ಬರ್ಗುಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವತಿ ಸಾವು: ರೂ.25 ಲಕ್ಷ ಪರಿಹಾರ ನೀಡುವಂತೆ ಮೆಸ್ಕಾಂ ಇಲಾಖೆಗೆ ಶಾಸಕ ಹರೀಶ್ ಪೂಂಜಾ ಆಗ್ರಹ

Suddi Udaya
error: Content is protected !!