April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಶಾರದಾ ಪೂಜೆ

ಉರುವಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ರಕ್ತೇಶ್ವರಿ ಪದವು ಇಲ್ಲಿ ಶಾರದಾ ಪೂಜೆಯು ಅ.6ರಂದು ನೆರವೇರಿತು.

ಶ್ರೀ ಮಂಜುನಾಥೇಶ್ವರ ಭಜನಾ ಮಂಡಲಿ ರಕ್ತೇಶ್ವರಿಪದವು  ಭಜನಾ ತಂಡದವರು ಕುಣಿತ ಭಜನೆ ಮಾಡಿದರು. ಶಾಲೆಯಲ್ಲಿ ನಿಯೋಜಿತ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ದಮಯಂತಿ. ಎಂ ಇವರನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ವತಿಯಿಂದ ಗೌರವಿಸಲಾಯಿತು.

ಜಗನ್ನಾಥ ವಂಜಾರೆ ಇವರು ಶಾರದ ಪೂಜೆಗೆ ಅರ್ಚಕರಾಗಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್ .ಡಿ .ಎಂ. ಸಿ ಅಧ್ಯಕ್ಷೆ ಶ್ರೀಮತಿ ಕವಿತಾಶ್ರೀ ಹಾಗೂ ಉಪಾಧ್ಯಕ್ಷೆ ಶ್ರೀಮತಿ ವೀಣಾ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಾಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ವಸಂತಕುಮಾರ್ ವಂಜಾರೆ-ಅಧ್ಯಕ್ಷರು ಗ್ರಾಮ ಅರಣ್ಯ ಸಮಿತಿ ನ್ಯಾಯತರ್ಪು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಾಗವೇಣಿ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು, ಎಸ್. ಡಿ .ಎಂ .ಸಿ ಸದಸ್ಯರು , ಪೋಷಕರು  ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

Related posts

ತುಳು ಸಿನಿ ರಸಿಕರಿಗೆ ಮನೋರಂಜನೆ ನೀಡಲು ಸಜ್ಜಾಗಿದೆ “ದಸ್ಕತ್” ನ.18 ರಂದು ಭಾರತ್ ಸಿನೆಮಾಸ್ ಮಂಗಳೂರಿನಲ್ಲಿ ಟ್ರೈಲರ್ ಲಾಂಚ್

Suddi Udaya

ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya

ಉಜಿರೆ ವಲಯದ ಮಾಚಾರು ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಮಡಂತ್ಯಾರು: ಶ್ರೀ ರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ: ಗಣಹೋಮ, ನಾಗ ದೇವರಿಗೆ ನಾಗ ತಂಬಿಲ ಸೇವೆ

Suddi Udaya

ಮರೋಡಿ: ಅಬುಸ್ವಾಲಿಹ್ ನಿಧನ

Suddi Udaya

ಅಟ್ಲಾಜೆ ದ.ಕ.ಜಿ.ಪ.ಕಿ.ಪ್ರಾ ಶಾಲೆಯಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!