ರೇಷ್ಮೆರೋಡ್ : ಅ.6. ರೇಷ್ಮೆರೋಡು ಅಶ್ವತನಗರ ದುರ್ಗಾ ಹೋಂ ಪ್ರಾಡಕ್ಟ್ ಮಾಲೀಕರಾದ ಸುನಂದಾ ಮತ್ತು ಸಂಜೀವ ಶೆಟ್ಟಿಯವರ ಮನೆಯಲ್ಲಿ ಪ್ರತಿ ವರ್ಷದಂತೆ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಅ.6 ರಂದು ಮನೆಯಲ್ಲಿ ನಡೆಯಿತು.

ಓಡೀಲು ಮಹಾಲಿಂಗೇಶ್ವರ ಭಜನಾ ಮಂಡಳಿ ತಂಡದಿಂದ ಕುಣಿತದ ಭಜನೆ ಹಾಗೂ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ವಿಠ್ಠಲ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.