ಬೆಳ್ತಂಗಡಿ ಬಂಟರ ಸಂಘದ ಮಡಂತ್ಯಾರು ವಲಯದ ಒಟ್ಟು ಏಳು ಗ್ರಾಮಗಳಲ್ಲಿ ,ಅ.06 ರಂದು ಎಸ್.ಡಿ.ಎಸ್ ಮಿನಿ ಹಾಲ್ ನಲ್ಲಿ ಸಭೆ ನಡೆಯಿತು.
ಪಾರೆಂಕಿ, ಕುಕ್ಕಳ ಹಾಗೂ ಮಚ್ಚಿನ ಗ್ರಾಮದ ಸಮಿತಿ ರಚನೆಯಲ್ಲಿ ವಲಯ ಅಧ್ಯಕ್ಷ ದಿವಾಕರ್ ಶೆಟ್ಟಿ ಕಂಗೆತ್ತಿಲು, ಗೌರವಾಧ್ಯಕ್ಷ ವಿಠಲ್ ಶೆಟ್ಟಿ ಮೂಡಾಯೂರು, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಸೋಣಂದೂರು ಹಾಗೂ ಮುಖ್ಯ ಅತಿಥಿಗಳಾಗಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಭಂಡಾರಿಗುಡ್ಡ ಜಯಂತ ಶೆಟ್ಟಿ, ಮಹಿಳಾ ಬಂಟರ ಸಂಘದ ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಮುಂಬೈ ಬಂಟರ ಸಂಘದ ರಘುನಾಥ್ ಶೆಟ್ಟಿ ಹಾರಬೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯ ಕಾರ್ಯದರ್ಶಿಯಾದ ಹರ್ಷ ನಾರಾಯಣ ಶೆಟ್ಟಿ ನೆತ್ತರ ನಡೆಸಿಕೊಟ್ಟರು.
ಈ ವೇಳೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್ ಚಂದ್ರ ಶೆಟ್ಟಿ ಪದೆಂಜಿಲ, ಕಾರ್ಯದರ್ಶಿಯಾಗಿ ದೀಕ್ಷಿತ್ ಶೆಟ್ಟಿ ಬಳ್ಳಮಂಜ, ಉಪಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಕುರ್ಡುಮೆ, ಜೊತೆ ಕಾರ್ಯದರ್ಶಿಯಾಗಿ ಭರತ್ ಶೆಟ್ಟಿ ಹಾರಬೆ, ಕೋಶಾಧಿಕಾರಿಯಾಗಿ ಯತೀಶ್ ರೈ ಕೈಲಾ, ನಿರ್ದೇಶಕರಾಗಿ ಪಾರೆಂಕಿ ಗ್ರಾಮ ಯಶ್ವಂತ್ ಶೆಟ್ಟಿ ಮೂಡಾಯುರು, ಪ್ರಕಾಶ್ ಶೆಟ್ಟಿ ಗಾಣದ ಕೊಟ್ಟ್ಯ, ಪ್ರಭಾಕರ ಶೆಟ್ಟಿ ಪರನೀರು, ಹರೀಶ್ ಶೆಟ್ಟಿ ಪದೆಂಜಿಲ, ಸಂದೀಪ್ ರೈ ಪರನೀರು, ಶ್ರೀಮತಿ ಹೇಮಲತಾ ಶೆಟ್ಟಿ ಹುಪ್ಪ, ಮಂಜುನಾಥ ಶೆಟ್ಟಿ ಪರನೀರು, ಕುಕ್ಕಳ ಗ್ರಾಮ ಉಮೇಶ್ ಶೆಟ್ಟಿ, ನೀರಂಜನ ಶೆಟ್ಟಿ, ಸಂಜಿತ್ ಶೆಟ್ಟಿ, ಶೋಧನ್ ಶೆಟ್ಟಿ, ಶ್ರೀಮತಿ ರೇಖಾ ಶೆಟ್ಟಿ ಕುರ್ಡಮೆ, ವಿನೋದ್ ಶೆಟ್ಟಿ, ರಮಾನಂದ ಶೆಟ್ಟಿ ಬೇರ್ಕಳ, ಮಚ್ಚಿನ ಗ್ರಾಮ ಹೇಮಂತ್ ಶೆಟ್ಟಿ ನೆತ್ತರ, ರಜತ್ ಶೆಟ್ಟಿ ನೆತ್ತರ, ಹರೀಶ್ ರೈ ಕುತ್ತಿನ, ಹರ್ಷಿತ್ ಶೆಟ್ಟಿ ಹಂಬೆಟ್ಟು, ಶ್ರೀಮತಿ ಗೀತಾಲತ ಶೆಟ್ಟಿ ಕೈಲ, ಶ್ರೀಮತಿ ಭವ್ಯ ಶೆಟ್ಟಿ ನೆತ್ತರ, ಗೌರವ ಸಲಹೆಗಾರರಾಗಿ ತಿಮ್ಮಪ್ಪ ಶೆಟ್ಟಿ ಪಾತಿಲ, ಸುಧೀರ್ ಜಯಂತ ಶೆಟ್ಟಿ, ಡಾ. ಕೆ ಎಂ ಶೆಟ್ಟಿ ಬಳ್ಳಮಂಜ, ಗಣೇಶ್ ಶೆಟ್ಟಿ ಆರ್ಕಜೆ ಆಯ್ಕೆಯಾದರು.