ಕನ್ಯಾಡಿ: ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರ ಧರ್ಮಸ್ಥಳದಲ್ಲಿ ಅ.3ರಿಂದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ‘ನವದುರ್ಗೆ’ಯವರ ದಿವ್ಯ ಸಾನಿಧ್ಯದಲ್ಲಿ ನವರಾತ್ರಿ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿಯಲ್ಲಿ ನಡೆಯುತ್ತಿದೆ.

ಅ.7 ರಂದು ಸ್ಕಂದ ಮಾತೆ ದೇವಿಗೆ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ಚಂಡಿಕಾಯಾಗ ನಡೆಯಿತು.
ಅ.3ರಿಂದ ಶೈಲಪುತ್ರಿ ದೇವಿ ಹಾಗೂ ಬ್ರಾಹ್ಮಣಿ ದೇವಿಗೆ, ಚಂದ್ರಘಂಟಾ ದೇವಿಗೆ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ ಜರಗಿತು.

ಕಾರ್ಯಕ್ರಮದಲ್ಲಿ ಸೇವಾಕರ್ತರು, ಭಕ್ತರು, ಅರ್ಚಕ ವೃಂದ, ಸಿಬ್ಬಂದಿಗಳು, ರಥ ಬೀದಿ ವ್ಯಾಪಾರಸ್ಥರು ಭಾಗವಹಿಸಿದ್ದರು. ಅ.8ರಂದು ಕಾತ್ಯಾಯಿನಿ ದೇವಿಗೆ ವಿಶೇಷ ಪೂಜೆ, ಅ.9ರಂದು ಕಾಳರಾತ್ರಿ ದೇವಿಗೆ ವಿಶೇಷ ಪೂಜೆ, ಅ.10ರಂದು ಮಹಾಗೌರಿ ದೇವಿಗೆ ವಿಶೇಷ ಪೂಜೆ, ಅ.11ರಂದು ಸಿದ್ದಿದಾತ್ರಿ ದೇವಿಗೆ ವಿಶೇಷ ಪೂಜೆ, ಅ.12ರಂದು ವಿಜಯದಶಮಿ ವಿಶೇಷ ಪೂಜೆ, ಆಯುಧ ಪೂಜೆ ನಡೆಯಲಿದೆ.