April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಪ್ರಾಕೃತಿಕ ವಿಕೋಪದಿಂದ ಮನೆ ಬಿರುಕುಗೊಂಡ ಕುಟುಂಬಕ್ಕೆ ಸಹಾಯಧನ ಹಸ್ತಾಂತರ

ಗುರಿಪಳ್ಳ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ತನ್ನ ಸಾಂತ್ವನ ನಿಧಿಯಿಂದ ಒಟ್ಟುಗೂಡಿಸಿದ ಸಹಾಯಧನದ ಮೊತ್ತವನ್ನು ಇತ್ತೀಚೆಗೆ ಸುರಿದ ಭಾರಿ ಮಳೆಗೆ ತನ್ನ ಮನೆಯ ಒಂದು ಪಾರ್ಶ್ವ ಸಂಪೂರ್ಣ ಬಿರುಕುಗೊಂಡು ಮನೆ ಸಂಪೂರ್ಣ ಕುಸಿಯುವ ಭೀತಿಯಲ್ಲಿರುವ ಗುರಿಪಳ್ಳದ ಹೆಬ್ಬಾರ್ ದೊಡಿ ನಿವಾಸಿ ನೋಣಯ್ಯ ಪೂಜಾರಿ ಇವರ ಕುಟುಂಬಕ್ಕೆ ಹತ್ತು ಸಾವಿರ ಮೊತ್ತದ ಚೆಕ್ ಹಸ್ತಾಂತರಿಸುವ ಮೂಲಕ ವಿತರಿಸಲಾಯಿತು.

ನೋಣಯ್ಯ ಪೂಜಾರಿಯವರ ಪತ್ನಿ ಶ್ರೀಮತಿ ಬೇಬಿ ಶ್ರಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಇವರಿಂದ ಚೆಕ್ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಕಾರ್ಯದರ್ಶಿ ನಿತೀಶ್ ಕೋಟ್ಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ. ಪ್ರಸಾದ್, ಯುವವಾಹಿನಿ ಬೆಳ್ತಂಗಡಿ ಅಧ್ಯಕ್ಷ ಸದಾಶಿವ ಊರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರಾದ ಗುರುರಾಜ್ ಗುರಿಪಳ್ಳ, ಜಯ ಕುಮಾರ್ ನಡ, ಚಂದ್ರಶೇಖರ್ ಇಂದಬೆಟ್ಟು, ಗ್ರಾಮ ಸಮಿತಿ ಅಧ್ಯಕ್ಷ ಪ್ರಸಾದ್ ಕುಮಾರ್, ಯುವವಾಹಿನಿ ಸಂಚಾಲನ ಸಮಿತಿ ಗುರಿಪಳ್ಳ ಅಧ್ಯಕ್ಷ ಜಯರಾಮ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶ್ರೀಮತಿ ದೇವಕಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

ಮಚ್ಚಿನ ಬೂತ್ ಸಂಖ್ಯೆ 181, 182, 183ರ ಮತಗಟ್ಟೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ

Suddi Udaya

ಬೆಳ್ತಂಗಡಿ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ

Suddi Udaya

ಮಾನಭಂಗ ಯತ್ನ, ಕಿಡ್ನಾಪ್ ಪ್ರಕರಣ : ಪ್ರಭಾಕರ ಹೆಗ್ಡೆಗೆ ನಿರೀಕ್ಷಣಾ ಜಾಮೀನು

Suddi Udaya

ಬಳಂಜ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಮಚ್ಚಿನ: ಕಲ್ಲೇರಿ ವಿದ್ಯುತ್ ಸರ್ವಿಸ್ ಸ್ಟೇಷನ್ ನಿoದ ಪಾರೆಂಕಿ ಗ್ರಾಮದ ಮಾರಿಗುಡಿ ವರೆಗೆ ಹೊಸ ಫೀಡರ್‌ ಗೆ ಚಾಲನೆ

Suddi Udaya
error: Content is protected !!