ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ (71 ವ) ರವರು ಅ.2ರಂದು ಮಧ್ಯಾಹ್ನ 12.00 ಗಂಟೆಗೆ ಗೇರುಕಟ್ಟೆ ಕೆನರಾ ಬ್ಯಾಂಕಿನ ATM ಕೇಂದ್ರದಲ್ಲಿ ಹಣ ಡ್ರಾ ಮಾಡುತಿದ್ದಾಗ ATM ಕೇಂದ್ರಕ್ಕೆ ಒಳ ಪ್ರವೇಶಿಸಿದ ಅಪರಿಚಿತ ಇಬ್ಬರು ವ್ಯಕ್ತಿಗಳು ಹಿಂದಿಯಲ್ಲಿ ಮಾತನ್ನಾಡಿ ಸಹಾಯಕ್ಕೆ ಬಂದಿದ್ದು, ಪಿರ್ಯಾದುದಾರರು ಸಹಾಯದ ಅಗತ್ಯ ಇಲ್ಲವೆಂದು ತಿಳಿಸಿದರೂ, ಅಪರಿಚಿತರು ಒಳಗಡೆಯೇ ನಿಂತಿದ್ದು, ನಂತರ ಪಿರ್ಯಾದುದಾರರು ಹಣ ತೆಗೆದು ATM ಕೇಂದ್ರದಿಂದ ATM ಕಾರ್ಡ್ ನೊಂದಿಗೆ ಹೊರಗಡೆ ಹೋಗಿದ್ದು, ನಂತರ ಅ.4ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ATM ಕೇಂದ್ರಕ್ಕೆ ಹೋದಾಗ, ಕಾರ್ಡ್ ರೀಡ್ ಆಗದೇ ಇದ್ದು, ನಂತರ ಪಿರ್ಯಾದುದಾರರು ಬ್ಯಾಂಕ್ ಗೆ ಹೋಗಿ ವಿಚಾರಿಸಲಾಗಿ ATM ಕಾರ್ಡ್ ಬದಲಾದ ಬಗ್ಗೆ ತಿಳಿಸಿದ್ದು, ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲಾಗಿ ಖಾತೆಯಲ್ಲಿದ್ದ ರೂ. 49,200/- ಹಣವನ್ನು ವಂಚಿಸಿ ತನ್ನ ATM ಕಾರ್ಡ್ ಬಳಸಿ, ಆ ದಿನ ATM ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ATM ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅ.9ರಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ : 86/2024, ಕಲಂ: 316(2), 318(4) BNS – 2023 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. 08256 – 232093