ಮೇಲಂತಬೆಟ್ಟು: ಮೇಲಂತಬೆಟ್ಟು ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.3 ರಿಂದ ಅ.11 ರವರೆಗೆ ಧರ್ಮದರ್ಶಿ ಯೋಗೀಶ್ ಪೂಜಾರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕ ಯಶಂವಂತ ಶಾಂತಿ ಹಾಗೂ ಲಕ್ಷ್ಮಣ ಶಾಂತಿಯವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಅ.3 ರಿಂದ ಅ.11 ರವರೆಗೆ ಪ್ರತಿದಿನ ಸಾಯಂಕಾಲ ಗಂಟೆ 7ಕ್ಕೆ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು. ಅ.9 ಬುಧವಾರ ಮೂಲ ನಕ್ಷತ್ರದಂದು ಬೆಳಿಗ್ಗೆ 6.3೦ರಿಂದ ಸ್ವಸ್ತಿ ಪುಣ್ಯಾಹ, ಗಣಹೋಮ, ಪಂಚಾಮೃತಾಭಿಷೇಕ, ನವಕ ಕಲಾಶಾಭಿಷೇಕ. ಗಂಟೆ 9ಕ್ಕೆ ದುರ್ಗಾ ಹೋಮ, ಮಧ್ಯಾಹ್ನ
ಗಂಟೆ 12ಕ್ಕೆ ಗುರುಪೂಜೆ, 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ಜರುಗಿತು. ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ. ಸಂಜೆ ಗಂಟೆ 6ಕ್ಕೆ ಶ್ರೀ ಭಗವತಿ ಭಜನಾ ಮಂಡಳಿ ಇವರಿಂದ ಭಜನಾ ಸೇವಾ ಕಾರ್ಯಕ್ರಮ ಸಂಜೆ ಗಂಟೆ 6.3೦ಕ್ಕೆ ಶ್ರೀಚಕ್ರ ಪೂಜೆ, ರಾತ್ರಿ ೮.೩೦ಕ್ಕೆ ಶ್ರೀ ದೇವಿ ಭಗವತಿ ಅಮ್ಮನವರಿಗೆ ರಂಗಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಅಂಕಾಜೆ ಮತ್ತು ಸರ್ವ ಸದಸ್ಯರು, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಹಾಗೂ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಭ್ರಾಮರಿ ಮತ್ತು ಪದಾಧಿಕಾರಿಗಳು, ಮೇಲಂತಬೆಟ್ಟು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಒಕ್ಕೂಟದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಊರ ಹಾಗೂ ಪರವೂರ ಭಕ್ತರು ಭಾಗವಹಿಸಿ ಧನ್ಯತೆಯನ್ನು ಪಡೆದರು.