26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಹೊಸ ವರ್ಷದ ಪ್ರಯುಕ್ತ ವಿಶೇಷ ಫಲಪುಷ್ಪಗಳಿಂದ ಅಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ

ಧರ್ಮಸ್ಥಳ: ಹೊಸ ವರ್ಷದ ಪ್ರಯುಕ್ತ ಶ್ರಿ ಕ್ಷೇತ್ರ ಧರ್ಮಸ್ಥಳವು ದೇವಸ್ಥಾನ ವಿಷೇಶ ಹೂವುಗಳಿಂದ ಕಂಗೋಳಿಸುತ್ತಿದೆ.

ಬೆಂಗಳೂರಿನ ಟಿವಿಎಸ್ ಉದ್ಯಮಿ ಗೋಪಾಲ್ ರಾವ್ ಹಾಗೂ ಇತರ ಉದ್ಯಮಿಗಳಾದ ಆನಂದ, ಮಂಜು, ಪುಟ್ಟಸ್ವಾಮಿ, ರಾಜು ಜತೆಗೂಡಿ ಬೆಂಗಳೂರಿನ ಶರವಣ್ ಅವರ ನೂರು ಮಂದಿ ಪುಷ್ಪಾಲಂಕಾರ ಮಾಡುವಲ್ಲಿ ಸಹಕರಿಸಿದರು.

ಕಳೆದ 15 ವರ್ಷಗಳಿಂದ ಅವರು ಈ ಸೇವೆಯನ್ನು ನೀಡುತ್ತಿದ್ದಾರೆ. ದೇಗುಲದ ಮುಖಮಂಟಪ, ಒಳಾಂಗಣ, ಹೊರಾಂಗಣ, ಗೋಪುರ, ಹೆಗ್ಗಡೆಯವರ ಬೀಡು ಸೇರಿದಂತೆ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದ ಹಣ್ಣು, ವಿದೇಶಿ, ಸಹಿತ ಸ್ವದೇಶಿ ಹೂಗಳು, ಕೊಯಮತ್ತೂರಿನ ಬಾಳೆದಿಂಡು, 8000 ತೆಂಗಿನಕಾಯಿ, 1 ಟನ್ ಬದನೆ, ಜೋಳ, ಸೇಬು, ಎಳನೀರು, ಡ್ರಾಗನ್ ಫೂಟ್, ಅಡಿಕೆ ಸಹಿತ ವಿವಿಧ ಹಣ್ಣುಗಳಿಂದ ಅಲಂಕರಿಸಲಾಗಿದೆ.

ದೇಗುಲದ ಮುಂಭಾಗ ಶಿವಪಾರ್ವತಿ, ಷಣ್ಮುಖ, ಗಣೇಶನ ಪ್ರತಿಕೃತಿಗಳಿಂದ ಸಾಂಪುದಾಯಿಕವಾಗಿ ಅಲಂಕಾರ ನಡೆಸಲಾಗಿದೆ.ಒಳಾಂಗಣದಲ್ಲಿ ಹೂಗಳ ತೋರಣ ಭಕ್ತರನ್ನು ಮಂತ್ರಮುಗ್ಧಗೊಳಿಸಿದೆ.

Related posts

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ರುಡ್‌ಸೆಟ್‌ನ 1000ನೇ ಫೋಟೋಗ್ರಫಿ–ವಿಡಿಯೋಗ್ರಫಿ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ತಂಡಗಳ ಸಮಾರೋಪ

Suddi Udaya

ಲಾಯಿಲ: ಬಜಕ್ಕಿರೆಸಾಲು ಬಳಿ ಚಿರತೆ ಓಡಾಟ

Suddi Udaya

ಕೊಕ್ರಾಡಿ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿದ ನೆಂಪು ಕಾರ್ಯಕ್ರಮ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 23.47 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಟ್ ಘೋಷಣೆ

Suddi Udaya
error: Content is protected !!