April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಶುಭಾರಂಭ

ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಅ.10ರಂದು ಶುಭಾರಂಭಗೊಂಡಿತು. ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸೆಕ್ಟರ್ ಕಿಶೋರ್ ಪಿ. ಉದ್ಘಾಟಿಸಿ ಶುಭ ಹಾರೈಸಿದರು.

ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಮಾಲಕರ ಮಾತ- ಪಿತರಾದ ಶ್ರೀಮತಿ ವಸಂತಿ ಮತ್ತು ಮೋನಪ್ಪ ಪೂಜಾರಿ ಧರ್ಮಸ್ಥಳ, ಇನ್ನಿತರ ಗಣ್ಯರು, ಗ್ರಾಹಕರು ಹಾಜರಿದ್ದು ಶುಭ ಕೋರಿದರು.

ಮಾಲಕ ರಶ್ಮಿ, ಸಂತೋಷ್ ಧರ್ಮಸ್ಥಳ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

ಮಳಿಗೆಯಲ್ಲಿ ಮಂಗಳೂರಿನ ಪ್ರತಿಷ್ಟಿತ ಕ್ಯಾಂಪೋ ಉತ್ಪನ್ನದ ಗಾಣದ ಶುದ್ಧ ಕೊಬ್ಬರಿ ಎಣ್ಣೆ, ಶೇ.100 ಆದಿವಾಸಿ ಹೇರ್ ಆಯಿಲ್, ಮಲ್ನಾಡ್ ಚಾಹುಡಿ, ಕಾಫಿ ಪುಡಿ, ಶುದ್ಧ ಜೇನುತುಪ್ಪ, ನಾಟಿ ಹಸುವಿನ ತುಪ್ಪ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ, ಕೂರ್ಗ್ ಸೈಸಸ್, ಮಿಲೆಟ್ಸ್ ಐಸ್‌ಕ್ರೀಮ್, ಸ್ಪೆಷಲ್ ಚಾಕಲೇಟ್ಸ್, ಡ್ರೈ ಫುಟ್ಸ್, ಫ್ಲವರ್ಸ್ ಹಾಗೂ ಇತರ ಸಾವಯವ ಉತ್ಪನ್ನಗಳು ಸಿಗಲಿದೆ.

ಸಮಾರಂಭಗಳಿಗೆ ಸಭಾಂಗಣ, ಶಾಮಿಯಾನ, ಕ್ಯಾಟರಿಂಗ್, ಟ್ರಾವೆಲ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಲಕ ಸಂತೋಷ್ ಧರ್ಮಸ್ಥಳ ತಿಳಿಸಿದರು.

Related posts

ಗೌಸಿಯಾ ಮುಸ್ಲಿಂ ವೆಲ್ಫೇರ್ ಎಸೋಸಿಯೇಶನ್ ಮಹಾಸಭೆ: ನೂತನ ಅಧ್ಯಕ್ಷರಾಗಿ ಅಯ್ಯೂಬ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮುರ ಆಯ್ಕೆ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳಾಲು ಶ್ರೀ ಧ.ಮಂ‌. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ವಿಚಾರಣೆಗೆ ಬರಲು ಪೊಲೀಸರು ನೋಟಿಸು ನೀಡಿಲ್ಲ: ಶಾಸಕರಿಗೆ ಗೃಹ ಬಂಧನದಂತೆ ಪೊಲೀಸರು ಮಾಡಿದ್ದಾರೆ

Suddi Udaya

ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿಯಾಗಿ ಅನುಜ್ಞ ಕಲಶ ಮತ್ತು ಸಂಕೋಚ ವಿಧಿ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ, ಪ್ರಸಾದ ಸ್ವೀಕಾರ

Suddi Udaya
error: Content is protected !!