April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡೂರು ಶ್ರೀ ನಾಗಂಬಿಕಾ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಪೂಜಾ ಮಹೋತ್ಸವ

ಮುಂಡೂರು: ಶ್ರೀ ನಾಗಾಂಬಿಕಾ ದೇವಸ್ಥಾನ ಮತ್ತು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ, ಮುಂಡೂರುನಲ್ಲಿ ಸಂಭ್ರಮದ ನವರಾತ್ರಿ ಮಹೋತ್ಸವವು ಅ.3 ರಿಂದ ಅ.11ರವರೆಗೆ ವಿವಿಧ ಧಾರ್ಮಿಕ ಹಾಗೂ ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮಗಳೊಂದಿಗೆ ಆಡಳಿತ ಮೊಕ್ತೇಸರ ರಾಜೀವ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.


ಅ.3 ಬೆಳಿಗ್ಗೆ ನವಕಲಶ ಪ್ರಧಾನ ಗಣಹೋಮ, ಶ್ರೀದೇವಿ ನಾಗಂಬಿಕಾ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ತೆನೆತುಂಬಿಸುವುದು, ರಾತ್ರಿ ನಾಗಾಂಬಿಕಾ ಭಜನಾ ಮಂಡಳಿಯ ಸದಸ್ಯರಿಂದ ಕುಣಿತಾ ಭಜನಾ ಕಾರ್ಯಕ್ರಮ ನಡೆಯಿತು. ಅ.4 ರಿಂದ ಅ. 10ರ ತನಕ: ಪ್ರತಿ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.


ಅ.10ರಂದು ಗುರುವಾರ ರಾತ್ರಿ ಉದ್ಭವ ಗಣಪತಿಗೆ ಮತತು ಶ್ರೀ ದೇವಿ ನಾಗಂಬಿಕಾ ಅಮ್ಮನವರಿಗೆ ಜೋಡುರಂಗಪೂಜೆ, ಶ್ರೀಮತಿ ಸ್ವಾಮಿ ಮತ್ತು ಅರ್ಪಣ್ ಶೆಟ್ಟಿ ಮಾ. ಅತ್ಯುಕ್ತ್ ಶೆಟ್ಟಿ ಪೂಂಜಶ್ರೀ ಇವರ ಸೇವೆ ನಡೆಯಿತು. ಅ.11ರಂದು ಬೆಳಿಗ್ಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಆಯುಧ ಪೂಜೆ. ರಾತ್ರಿ ನಾಗಾಂಬಿಕಾ ಭಜನಾ ಮಂಡಳಿ ಇವರಿಂದ ‘ಕುಣಿತ ಭಜನಾ ಕಾರ್ಯಕ್ರಮ’ ರಾತ್ರಿ 7.3೦ಕ್ಕೆ 9 ಜನ ಮುತ್ತೈದೆಯರಿಗೆ ಬಾಗಿನ ಸಮರ್ಪಣೆ, ಬಳಿಕ ಉದ್ಭವ ಮಹಾಗಣಪತಿಗೆ ಮತ್ತು ಶ್ರೀ ದೇವಿ ನಾಗಾಂಬಿಕಾ ಅಮ್ಮನವರಿಗೆ “ಜೋಡಿ ರಂಗಪೂಜೆ”, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 10ರಿಂದ ವರಾಹಿಮಂತ್ರಮೂರ್ತಿ, ನಾಗಕಲ್ಲುರ್ಟಿ, ಸತ್ಯದೇವತೆ, ದೈವರಾಜ ಗುಳಿಗ, ಕೊರಗಜ್ಜ ದೈವಗಳಿಗೆ ‘ಹರಕೆಕೋಲ; ಶ್ರೀಮತಿ ಮತ್ತು ಪ್ರಶಾಂತ್ ಮಜ್ಜೆನಿ ಇವರ ಸೇವೆಯಾಗಿ ನಡೆಯಿತು.


ಆಡಳಿತ ಮೊಕ್ತೇಸರರಾದ ಜೀವ, ಶ್ರೀ ನಾಗಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸಂತೋಷ್, ಕಾರ್ಯದರ್ಶಿ ಜಯರಾಜ್, ಉಪಾಧ್ಯಕ್ಷರು ಪ್ರಶಾಂತ್ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಹಾಗೂ ಸರ್ವಸದಸ್ಯರು, ಹಾಗೂ ಮಂಗಳಗಿರಿ ಸ್ವಸಹಾಯ ಸಂಘದ ಸಂತೋಷ್

ಕುಮಾರ್, ಜಯರಾಜ್, ಪ್ರದೀಪ್ ಕುಲಾಲ್, ಶ್ರೀಮತಿ ಪುಷ್ಪಾವತಿ, ಗುಣಕರ ಕೋಟ್ಯಾನ್, ಶ್ರೀಮತಿ ಸರೋಜ, ಅನೋಜ್, ಹರೀಶ್ ಕುಲಾಲ್ ಮತ್ತು ಸರ್ವ ಸದಸ್ಯರು ಹಾಗೂ ಊರ ಪರವೂರ ಭಗವದ್ಭಕ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಊರ ಹಾಗೂ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಲಾರಿ ಟಯ‌ರ್ ಜೋಡಣೆ ವೇಳೆ ಅಪಘಾತ: ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ನಿವಾಸಿ ರಶೀದ್‌ ಗಂಭೀರ

Suddi Udaya

ಕಾಶಿಪಟ್ಣ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಆಯ್ಕೆ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ತಂಬಾಕು ರಹಿತ ದಿನ

Suddi Udaya

ಮಲೆಬೆಟ್ಟು ಹಾ.ಉ.ಸಂ. ನಿರ್ದೇಶಕ ಪ್ರವೀಣ್ ಪೂಜಾರಿ ಬಿಜೆಪಿ ಸೇರ್ಪಡೆ

Suddi Udaya

ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಟೆಂಪೋ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಉಪಾಧ್ಯಕ್ಷರಾಗಿ ದಿನೇಶ್ ಕೋಟ್ಯಾನ್

Suddi Udaya
error: Content is protected !!