23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಾತೃ ವೇದಿಕೆ ಉದನೆ ವಲಯ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ಗೆ ಸಮಗ್ರ ಪ್ರಶಸ್ತಿ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಮಾತೃ ವೇದಿಕೆ ಉದನೆ ವಲಯದ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟವು ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಉದನೆ ವಲಯದ ಧರ್ಮಗುರು ವಂದನೀಯ ಫಾ. ಸಿಬಿ ತೋಮಸ್ ಪನಚಿಕ್ಕಲ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಎಸ್.ಎಚ್. ಭಗಿನಿಯರ ಬೆಳ್ತಂಗಡಿ ವಲಯ ಸುಪೀರಿಯರ್ ವಂದನೀಯ ಸಿಸ್ಟರ್ ಲಿಸ್ ಮಾತ್ಯು, ವಲಯ ಮಾತೃ ವೇದಿಕೆಯ ಅಧ್ಯಕ್ಷೆ ಶ್ರೀಮತಿ ನಿಶಾ ಜಿಮ್ಮಿ ವಡಯಾಟ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಸ್ಟರಲ್ ಕೌನ್ಸಿಲ್ ಸದಸ್ಯರಾದ ಶ್ರೀ ಜಿನೋಯ್ ಮೈತೋಟ್ಟತ್ತಿಲ್, ಶ್ರೀ ಪಿ.ಸಿ. ಚಾಕೋ (ಉದನೆ), ಎಲಿಸ್ ಬೆತ್ (ಉದನೆ), ಶ್ರೀಮತಿ ಜೆಸ್ಸಿ ಕೆ.ಜೆ (ಕಾರ್ಯದರ್ಶಿ, ಪಾಸ್ಟರಲ್ ಕೌನ್ಸಿಲ್, ಬೆಳ್ತಂಗಡಿ ಧರ್ಮಪ್ರಾಂತ್ಯ),ಶಿರಾಡಿ ಯ ಧರ್ಮಗುರು ವಂದನೀಯ ಫಾ. ಜೋಸೆಫ್ ಪೂದಕ್ಕುಯಿ. ಶಿರಾಡಿಯ ಧರ್ಮಗುರು ಟ್ರಸ್ಟಿಗಳಾದ ಶ್ರೀ ಅಲ್ಬಿನ್, ಜೋಬಿನ್, ಶಿಬು, ಅಲೆಕ್ಸ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳೆಯರು ತಮ್ಮ ಗೃಹಸ್ಥ ಶ್ರಮ ಜೀವನದಲ್ಲಿ, ಅಡಗಿರುವ ಪ್ರತಿಭೆಗಳನ್ನು ಹೊರತಂದು, ಸಮಾಜಮುಖಿ ಬದುಕಿಗೆ ಒತ್ತು ಕೊಟ್ಟಾಗ ಒತ್ತಡವನ್ನು ನಿವಾರಿಸಿ ಸಂತೋಷದ ಜೀವನ ನಡೆಸಲು ಸಾಧ್ಯವಿದೆ ಎಂದು ಸಭೆಯಲ್ಲಿ ಕರೆ ನೀಡಲಾಯಿತು.

ಈ ಕಾರ್ಯಕ್ರಮದ ಭಾಗವಾಗಿ ಮಾರ್ಗಮ್ ಕಳಿ, ಸ್ಕಿಟ್, ಥ್ರೋ ಬಾಲ್, ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದಿದ್ದು, ಸಂತ ಅಲ್ಫೋನ್ಸ ಚರ್ಚ್ (ನೆಲ್ಯಾಡಿ) ಚಾಂಪಿಯನ್ ಆಗಿ ಹೊರಹೊಮ್ಮಿತು. ಉದನೆ ಸೆಂಟ್ ಥೋಮಸ್ ಚರ್ಚ್ ದ್ವಿತೀಯ ಸ್ಥಾನ ಪಡೆದಿತು.

ಅಡ್ಡಹೊಳೆ, ಶಿರಾಡಿ, ಆರ್ಲ, ಇಚಿಲಂಪಾಡಿ, ಉದನೆ, ನೆಲ್ಯಾಡಿ, ಹಾಗೂ ಅರಸಿನಮಕ್ಕಿ ಚರ್ಚುಗಳ ಮಾತೆಯರು ಈ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು. ನೆಲ್ಯಾಡಿ ಧರ್ಮ ಗುರುಗಳಾದ ವಂದನಿಯ ಫಾ ಶಾಜಿ ಮಾತ್ಯು ಕಾರ್ಯಕ್ರಮವನ್ನು ಆಯೋಜಿಸಿದರು.

Related posts

ಮನಸೂರೆಗೊಂಡ ಸರ್ವಧರ್ಮಗಳಲ್ಲಿ ಹಾಗೂ ಸಂವಿಧಾನದಲ್ಲಿ ಕ್ಷಮಾಧರ್ಮ ಆನ್ಲೈನ್ ಕಾರ್ಯಕ್ರಮ

Suddi Udaya

ಒಡಿಶಾದಲ್ಲಿ ರಾಷ್ಟ್ರೀಯ ಯುವ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಕರ್ನಾಟಕ ಮಹಿಳಾ ತಂಡವನ್ನು ಪ್ರತಿನಿಧಿಸಲಿರುವ ಎಸ್.ಡಿ.ಎಂ ನ ಕ್ರೀಡಾಪಟುಗಳು

Suddi Udaya

ನ.28: ಉಜಿರೆಯಲ್ಲಿ ರಮ್ಯಾ 1 ಗ್ರಾಂ ಗೋಲ್ಡ್ & ಫ್ಯಾನ್ಸಿ ಫೂಟ್‌ವೇರ್‌ನ ನೂತನ ಶೋರೂಂ ಶುಭಾರಂಭ

Suddi Udaya

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವರ ಮತ್ತು ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ನ ದ್ವಿತೀಯ ಸಾಮಾನ್ಯ ಸಭೆ

Suddi Udaya

ನಾವೂರು: ಗೋಳಿದಡಿ ನಿವಾಸಿ ಲೀಲಾವತಿ ನಿಧನ

Suddi Udaya

ಎಂಡೋಸಲ್ಫಾನ್ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಯಂತ್ರ ಹಸ್ತಾಂತರ

Suddi Udaya
error: Content is protected !!