24.8 C
ಪುತ್ತೂರು, ಬೆಳ್ತಂಗಡಿ
April 1, 2025
Uncategorized

ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

ನಡ :ವಿದ್ಯಾರ್ಥಿಗಳು ಶಾಲಾ ಶಿಕ್ಷಣದೊಂದಿಗೆ ಜೀವನ ಶಿಕ್ಷಣವನ್ನು ಪಡೆದಾಗ ಯಶಸ್ಸನ್ನು ಗಳಿಸಬಹುದು ಎಂದು ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಎಸ್ ಹೇಳಿದರು.
ಅವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ I ಇಲ್ಲಿ ನಡೆಯಲಿರುವ ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪುಸ್ತಕದಿಂದ ಪರಿಸರಕ್ಕೆ, ಪೆನ್ನಿನಿಂದ ಪಿಕ್ಕಾಸಿನೆಡೆಗೆ, ಕಾಲೇಜಿನಿಂದ ಗ್ರಾಮೀಣ ಪ್ರದೇಶಕ್ಕೆ ಬಂದಾಗ ನಿಜವಾದ ಜ್ಞಾನವನ್ನು ಗಳಿಸಿಕೊಳ್ಳಲು ಸಾಧ್ಯವಿದೆ. ತಮ್ಮಲ್ಲಿರುವ ಋಣಾತ್ಮಕ ವಿಚಾರಗಳನ್ನು ಕಳೆದು ಗುಣಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳಲು ಎನ್ ಎಸ್ ಎಸ್ ಸಹಕಾರಿಯಾಗಲಿದೆ ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪಿ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಕನ್ಯಾಡಿ I ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತರಾಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನೋಣಯ್ಯ ಗೌಡ, ಬಂಗಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್, ಬೆಳ್ತಂಗಡಿ ಸಿ. ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ಎಸ್, ನಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ ಕಡ್ತಿಯಾರ್, ಕೃಷಿಕರಾದ ಪವನ್ ಶೆಟ್ಟಿ ಉಪಸ್ಥಿರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ಧನ್ಯವಾದವಿತ್ತರು. ಎನ್ಎಸ್ಎಸ್ ನ ಸಹ ಕಾರ್ಯಕ್ರಮ ಅಧಿಕಾರಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Related posts

ಕುತ್ರೊಟ್ಟು ಬಂಗಾಡಿ ಹಾಡಿದೈವ ಉಳ್ಳಾಕುಳ ಕ್ಷೇತ್ರದಲ್ಲಿ ಚಂಡಿಕಾ ಯಾಗ ಹಾಗೂ ವರ್ಷಾವಧಿ ಜಾತ್ರೆ

Suddi Udaya

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ನಾಲ್ಕೂರು ಅಂಗನವಾಡಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಆಯಾನ್ಶ್ ಸುಧಾಮ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya

ಆ.16: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!