24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

ಬೆಳ್ತಂಗಡಿ: ಇತ್ತೀಚೆಗಷ್ಟೇ ನಮ್ಮನೆಲ್ಲ ಅಗಲಿರುವ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಪೂರ್ವ ಅಧ್ಯಕ್ಷರಾದ ಪೃಥ್ವಿ ರಂಜನ್ ರಾವ್ ರವರಿಗೆ ಗೌರವ ಪೂರ್ವಕ ನುಡಿ ನಮನವನ್ನು ಜೆಸಿ ಭವನದಲ್ಲಿ ಸಲ್ಲಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಹಾಗೂ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡುವ ಮೂಲಕ ಘಟಕದ ಪರವಾಗಿ ಗೌರವವನ್ನು ಸಲ್ಲಿಸಲಾಯಿತು.

1983ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರ ಎಲ್ಲಾ ಅಧ್ಯಕ್ಷರುಗಳಿಗೆ ಮಾರ್ಗದರ್ಶನವನ್ನು ಮಾಡುತ್ತಾ ಜೆಸಿ ಸಂಸ್ಥೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಂತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮಾಜಿಕವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುತಾರೆ.

ಇವರ ಪತ್ನಿ ಉಮಾ ರಾವ್ ರವರು ಕೂಡ ಜೆಸಿರೇಟ್ ವಿಭಾಗದ ಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ ಹಾಗೂ ಪುತ್ರ ರತೀಶ್ ಹಾಗೂ ಸೊಸೆ ಪ್ರೀತಿ ರತೀಶ್ ಕೂಡ ಜೆಸಿಐ ಬೆಳ್ತಂಗಡಿಯ ಮಂಜುಶ್ರೀಯ ಸಕ್ರಿಯ ಸದಸ್ಯರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ರವರು ವಹಿಸಿದ್ದರು.

ಘಟಕದ ಪೂರ್ವ ಅಧ್ಯಕ್ಷರಾದ ಚಿದಾನಂದ ಇಡ್ಯಾ ರವರು ಪೃಥ್ವಿರಂಜನ್ ರಾವ್ ರವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಬಗ್ಗೆ ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ನುಡಿ ನಮನವನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಮುಂಡ್ಕುರು ಭಾರ್ಗವ ಘಟಕದ ಪೂರ್ವ ಅಧ್ಯಕ್ಷರು ಹಾಗೂ ವಲಯ ಹದಿನೈದರ ಲೇಡಿ ಜೆಸಿ ವಿಭಾಗದ ಸಂಯೋಜಕರಾದ ಮಾಲತಿ ಉಮೇಶ್ ಹಾಗೂ ಜೆಸಿಐ ಮುಂಡ್ಕುರ್ ಭಾರ್ಗವ ಘಟಕದ ಅಧ್ಯಕ್ಷರಾದ ಗಣೇಶ್ ಆಚಾರ್ಯ, ಜೆಸಿಐ ಮಂಗಳೂರು ಸಾಮ್ರಾಟ್ ಘಟಕದ ಸದಸ್ಯರು, ಯುವ ಉದ್ಯಮಿಗಳಾದ ವರುಣ್ ಪ್ರಭು ಪ್ರಭು, ಬೆಳ್ತಂಗಡಿ ಘಟಕದ ಪೂರ್ವ ಅಧ್ಯಕ್ಷರುಗಳಾದ ಪ್ರಶಾಂತ್ ಲಾಯಿಲ, ನಾರಾಯಣ ಶೆಟ್ಟಿ, ಲೇಡಿ ಜೆಸಿ ಸಂಯೋಜಕರಾದ ಶ್ರುತಿರಂಜಿತ್, ಉಪಾಧ್ಯಕ್ಷರುಗಳಾದ ಆಶಾ ಪ್ರಶಾಂತ್, ಚಂದ್ರಹಾಸ್, ಶೈಲೇಶ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಅಕ್ಷಯ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅನುದೀಪ್ ಜೈನ್ ರವರ ಧನ್ಯವಾದವಿತ್ತರು.

Related posts

ಮೇಲಂತಬೆಟ್ಟು: ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

Suddi Udaya

ನಾರಾವಿ ಅರಸು ಕಟ್ಟೆಯಲ್ಲಿ ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಸಾವು

Suddi Udaya

ಕೊಕ್ರಾಡಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

Suddi Udaya

ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಚಾರ್ಮಾಡಿ ಗ್ರಾಮದಲ್ಲಿ ಹೋರಾಟ ಸಮಿತಿ ರಚನೆ

Suddi Udaya

ಬಂದಾರು ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya
error: Content is protected !!