34.3 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವೇಣೂರು: ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕನ ಬಂಧನ: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

ವೇಣೂರು: ಗೋಳಿಯಂಗಡಿಯಲ್ಲಿರುವ ಐಟಿಐ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಸಜೀಪ ಮೂಲದ ಹುಲ್ಲು ತೆಗೆಯುವ ಮೆಷಿನ್ ರಿಪೇರಿ ಕೆಲಸ ಮಾಡುವ ಜಮಾಲ್ ಬಂಧಿತ ಆರೋಪಿ. ಈತ ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಕೇಳುತ್ತಿದ್ದು, ಕಾಲೇಜಿಗೆ ಬೈಕಿನಲ್ಲಿ ಡ್ರಾಪ್ ಮಾಡುತ್ತೇನೆ ಎಂದು ಹೇಳುತ್ತಾ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಯುವಕನ ವರ್ತನೆಯಿಂದ ಗಾಬರಿಗೊಂಡಿದ್ದ ವಿದ್ಯಾರ್ಥಿನಿಯರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಅವರು ಆರೋಪಿಯನ್ನು ವಿಚಾರಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸೆ. 3: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ

Suddi Udaya

ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya

ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವೆಂಚುರಾ- 2023’ ಸಮಾರೋಪ ಸಮಾರಂಭ

Suddi Udaya

ಕಾರೊಂದು ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ: ಯುವಕನನ್ನು ಬಂಧಿಸಿದ ಪೋಲಿಸರು

Suddi Udaya

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!