ಬೆಳ್ತಂಗಡಿ : ತೋಟಗಾರಿಕೆ ಬೆಳೆಗಳಿಗೆ ರಿಯಾಯಿತಿ ದರದಲ್ಲಿ ಔಷಧಿಗಳು ಲಭ್ಯ

Suddi Udaya

ಬೆಳ್ತಂಗಡಿ ತಾಲೂಕಿನ ರೈತ ಬಾಂಧವರ ಗಮನಕ್ಕೆ ತಾಲೂಕಿನ ಪ್ರಮುಖ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು ಹಾಗೂ ಕೋಕೋ ಬೆಳೆಗಳಿಗೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಾಗೂ ಪೋಷಕಾಂಶಗಳ ನಿರ್ವಹಣೆ ಕೊರತೆಯಿಂದಾಗಿ ಕೀಟ ಮತ್ತು ರೋಗಗಳ ಬಾಧೆ ತೀವ್ರಗೊಂಡು ರೈತರು ಆರ್ಥಿಕ ನಷ್ಟ ಅನುಭವಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ.

2024-25ನೇ ಸಾಲಿನ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ಶೇ 75ರ ರಿಯಾಯಿತಿ ದರದಲ್ಲಿ ಈ ಕೆಳಕಂಡ ಔಷಧಿಗಳು ಲಭ್ಯವಿದ್ದು ರೈತರು ಸದುಪಯೋಗಪಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಕೋರಿದೆ. ಶಿಲೀಂದ್ರದಿಂದ ಉದ್ಭವಿಸುವ ರೋಗಗಳಿಗೆ Mancozeb 75% WP (2 ಗ್ರಾಂ/ಲೀ) ಮತ್ತು Propiconazole 25% EC (1 ml/ಲೀ) ಹಾಗೂ ರಸ ಹೀರುವ ಕೀಟಗಳ ಆತೋಟಿಗಾಗಿ Thiamethoxam 25% WG( 0.25 ml/ಲೀ) ಸಿಂಪಡಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಿದೆ ಬೆಳ್ತಂಗಡಿ ಹೋಬಳಿ ಮಹಾವೀರ ಶೇಬಣ್ಣವರ ನೇ, ಮೊಬೈಲ್ ನಂ: 8123921087 ವೇಣೂರು ಹೋಬಳಿ ಭೀಮರಾಯ ಸೊಡ್ಡಗಿ, ಮೊಬೈಲ್ ನಂ: 9741713598 , ಕೊಕ್ಕಡ ಹೋಬಳಿ ಮಲ್ಲಿನಾಥ ಬಿರಾದಾರ ಮೊ.ನಂ. 9986411477ಮ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರಶೇಖರ್ ಮೊ.ನಂ. 9448336863 .

Leave a Comment

error: Content is protected !!