23.5 C
ಪುತ್ತೂರು, ಬೆಳ್ತಂಗಡಿ
April 4, 2025
ಶಾಲಾ ಕಾಲೇಜು

ವಿದ್ವತ್ ಪಿಯು ಕಾಲೇಜಿನಲ್ಲಿ ” ವಿಜ್ ವರ್ಲ್ಡ್- 2024″ ಸ್ಪರ್ಧೆ

ಬೆಳ್ತಂಗಡಿ: ವಿದ್ವತ್ ಪಿಯು ಕಾಲೇಜಿನಲ್ಲಿ” ವಿಜ್ ವರ್ಲ್ಡ್- 2024″ ಸ್ಪರ್ಧೆ ಇಂದು ನಡೆಯಿತು. ಟಿವಿಯಲ್ಲಿ ಪ್ರಸ್ತುತ ಪಡಿಸುವ ಹಾಗೆಯೇ ಒಂದು ಗಂಟೆಯ ಸುದ್ದಿ ಪ್ರಸ್ತುತಪಡಿಸುವನೇರ ಪ್ರಸಾರದ ಸ್ಪರ್ಧೆ ಇದಾಗಿದ್ದು ಸ್ಪರ್ಧೆಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ವಿದ್ವತ್ ಮೀಡಿಯಾ ವಾಹಿನಿ ಹಾಗೂ ವಿದ್ವತ್ ಟೈಮ್ ವಾಹಿನಿಗಳಾಗಿ ಭಾಗವಹಿಸಿದ್ದರು.

ಈ ಒಂದು ಗಂಟೆಯ ಸುದ್ದಿ ಪ್ರಸ್ತುತ ಪಡಿಸುವ ಸ್ಪರ್ಧೆಯಲ್ಲಿ ಸುದ್ದಿ ನಿರೂಪಕರು, ವರದಿಗಾರರು, ಸುದ್ದಿ ವಿಶ್ಲೇಷಕರು, ಚರ್ಚೆ ನಡೆಸಿಕೊಡುವವರು ಹಾಗೂ ಚರ್ಚೆಯಲ್ಲಿ ಭಾಗವಹಿಸುವ ವಿಷಯ ತಜ್ಞರು ಸೇರಿ ಒಟ್ಟು 10 ವಿದ್ಯಾರ್ಥಿಗಳು ಪ್ರತೀ ತಂಡದಲ್ಲಿದ್ದರು. ಡಿಜಿಟಲ್ ತಂತ್ರಜ್ಞಾನ ಬಳಸಿ, ಕಾಲೇಜಿನ ಡಿಜಿಟಲ್ ಬೋರ್ಡ್ನಲ್ಲಿ ಪ್ರಸ್ತುತ ಪಡಿಸಿದ ಈ ಪ್ರಸಾರ ಒಂದು ಟಿವಿ ಮಾಧ್ಯಮ ಒಂದು ಗಂಟೆಯ ನ್ಯೂಸ್‌ನಲ್ಲಿ ಯಾವೆಲ್ಲಾ ಅಂಶಗಳನ್ನು ಹೊರತ್ತರುತ್ತದೆಯೋ ಆ ಎಲ್ಲಾ ಅಂಶಗಳನ್ನು ಒಳಗೊಂಡಿತ್ತು. ಒಂದು ಗಂಟೆಯ ಈ ಪ್ರಸ್ತುತಿ ಯಾವ ಪ್ರತಿಷ್ಠಿತ ಸುದ್ದಿ ವಾಹಿನಿಗೂ ಕೂಡ ಯಾವ ರೀತಿಯಲ್ಲೂ ಕಡಿಮೆಯಿರಲಿಲ್ಲ. ನೆರೆದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ ಈ ಕಾರ್ಯಕ್ರಮ ವ್ಯಕ್ತಿತ್ವ ವಿಕಸನಕ್ಕೆ ಹಿಡಿದ ಕನ್ನಡಿಯಂತಿತ್ತು.

ಪ್ರತೀ ಸ್ಪರ್ಧಿಯು ಮಾತನಾಡುವ ಬಗೆ ಅವರ ಸ್ಪಷ್ಠತೆ, ವಿಷಯ ಮಂಡನೆ, ಮುಂತಾದವುಗಳ ಸಂಪೂರ್ಣ
ತರಬೇತಿಯನ್ನ ಇನ್‌ಫೈರ್ ವಿದ್ವತ್ ಪೋರಂವಹಿಸಿಕೊಂಡು ವೃತ್ತಿಪರತೆ ಹಾಗೂ ಸ್ಪರ್ಧಾತ್ಮಕ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈ ವಿದ್ವತ್‌ ವಿಜ್ ವರ್ಲ್ಡ್ – 2024″ ಒಂದು ರಚನಾತ್ಮಕ ಹಾಗೂಕ್ರಿಯಾಶೀಲ
ಚಟುವಟಿಕೆಯಾಗಿದ್ದು ವಿದ್ವತ್ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ವೇದಿಕೆಯಾಗಿದೆ
ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಪ್ರತಿಕ್ರಿಯಿಸಿದ್ದಾರೆ. ಸಂಸ್ಥೆಯ ಟ್ರಸ್ಟಿ ಎಂ.ಕೆ ಕಾಶಿನಾಥ್ ಹಾಗೂ ಶೈಕ್ಷಣಿಕ ನಿರ್ದೇಶಕರಾದ
ಗಂಗಾಧರ ಇಮಂಡಗಳಲೆ ಹಾಗೂಪ್ರಾಂಶುಪಾಲರು ಎಲ್ಲಾ
ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related posts

ಕಾಶಿಪಟ್ಣ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಮರೋಡಿಯಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ಕೂಕ್ರಬೆಟ್ಟು ಸರಕಾರಿ ಶಾಲೆ: ರೂ.1.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕಟ್ಟಡ, ರಾಷ್ಟ್ರ ಧ್ವಜ ಕಟ್ಟೆ ಉದ್ಘಾಟನೆ,

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಪ್ರಮುಖ 2025: ಜಿಲ್ಲಾಮಟ್ಟದ ವಸ್ತುಪ್ರದರ್ಶನ ಹಾಗೂ ಅಂತರ ಕಾಲೇಜು ಉತ್ಸವ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲರವ-2025 ಕಾರ್ಯಕ್ರಮ ಉದ್ಘಾಟನೆ

Suddi Udaya

ನಾಳೆ (ಆ.2) ದ.ಕ. ಜಿಲ್ಲಾದ್ಯಂತ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ನಾವೂರು ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!