ಗುರುವಾಯನಕೆರೆ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿಯಾಗಿ- ಕೊಡಮಣಿತ್ತಾಯ ಸನ್ನಿಧಾನದಲ್ಲಿ ಚಂಡಿಕಾ ಹೋಮ ಹಾಗೂ ಮೃತ್ಯುಂಜಯ ಹೋಮ: ಮೆರವಣಿಗೆಯ ಮೂಲಕ ಮುಷ್ಟಿ ಕಾಣಿಕೆ ದೈವಕ್ಕೆ ಸಮಪ೯ಣೆ

Suddi Udaya

Updated on:

ಗುರುವಾಯನಕೆರೆ: ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟದಲ್ಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ
ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ

ಬ್ರಹ್ಮಕುಂಭಾಭಿಷೇಕದ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿರುವಂತೆ ಕುವೆಟ್ಟು, ಓಡಿಲ್ನಾಳ, ಪಡಂಗಡಿ, ಸೋಣಂದೂರು ಹಾಗೂ ಮೇಲಂತಬೆಟ್ಟು ಗ್ರಾಮಗಳ ದೋಷಪರಿಹಾರಾರ್ಥವಾಗಿ ಅ. 17ರಂದು ಚಂಡಿಕಾ ಹೋಮ ಹಾಗೂ ಮೃತ್ಯುಂಜಯ ಹೋಮ ಕೊಡಮಣಿತ್ತಾಯ ಸನ್ನಿಧಾನದಲ್ಲಿ ನಡೆಯಿತು.


ಈ ಶುಭ ಸಂದರ್ಭದಲ್ಲಿ ಐದು ಗ್ರಾಮದ ಗ್ರಾಮಸ್ಥರು ಊರಿನ ಅಭಿವೃದ್ದಿಗೋಸ್ಕರ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ
ಜನರ ಸುಭಿಕ್ಷೆಗಾಗಿ ದೈವಭಕ್ತರು ಸ್ವಯಂಸೇವಕರಾಗಿ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಸಂಗ್ರಹಿಸಿದ
ಮುಷ್ಟಿ ಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ದೈವಕ್ಕೆ ಸಮಪಿ೯ಸಲಾಯಿತು.


ಬೆಳಿಗ್ಗೆ ಗೋಪಾಲಕೃಷ್ಣ ತಂತ್ರಿ ಹಾಗೂ ವೈದಿಕರ ತಂಡದಿಂದ ಚಂಡಿಕಾ ಹೋಮ ಬಳಿಕ ಮೃತ್ಯುಂಜಯ ಹೋಮ ಪೂಣಾ೯ಹುತಿ ಕೊಡಮಣಿತ್ತಾಯ ಸನ್ನಿಧಾನದಲ್ಲಿ ಐದು ಗ್ರಾಮಗಳ ಹಾಗೂ ಊರ, ಪರವೂರ ಭಕ್ತರ ಉಪಸ್ಥಿತಿಯಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಜರುಗಿತು. ಕಾಯ೯ಕ್ರಮದಲ್ಲಿ ದೈವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರಾದ ಸುಖೇಶ್ ಕುಮಾರ್ ಕಡಂಬು, ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ನವಶಕ್ತಿ, ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ ಶಕ್ತಿನಗರ, ಸಂಪತ್ ಸುವರ್ಣ, ಜಯರಾಮ ಶೆಟ್ಟಿ ಪಡಂಗಡಿ, ಧರಣೇಂದ್ರ ಕೆ.ಜೈನ್, ಸುನೀಶ್ ಕುಮಾರ್ ಕಡಂಬು, ಗೋಪಿನಾಥ್ ನಾಯಕ್ ವಡಿವೇಲು, ಆನಂದ ಶೆಟ್ಟಿ ವಾತ್ಸಲ್ಯ ಶಕ್ತಿನಗರ, ಕೃಷ್ಣಾನಂದ ಕುಲಾಲ್, ಆಶಾಲತಾ, ರಚನಾ ಭಟ್,ಆನಂದ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!