ಉಜಿರೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್ ಉಜಿರೆಯಲ್ಲಿ ಅ.17 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.


ಮಾನವರಲ್ಲಿರಬೇಕಾದ ಆದರ್ಶ ಗುಣಗಳು, ಅನುಸರಿಸಬೇಕಾಗಿರುವ ನೀತಿ, ಭಾತೃತ್ವತೆ, ತ್ಯಾಗ, ರಾಜನೀತಿ, ಧರ್ಮ ಪಾಲನೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಮನುಕುಲಕ್ಕೆ ಪರಿಚಯಿಸಿ ಮಾರ್ಗದರ್ಶನ ನೀಡಿರುವ ಮಹರ್ಷಿಯವರು ಶ್ರೇಷ್ಠರೆನಿಸಿಕೊಂಡು ಸರ್ವರಿಂದಲೂ ಇಂದು ಪೂಜಿಸಲ್ಪಡುತಿದ್ದಾರೆ ಎಂದು ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ನುಡಿದರು.


ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಆದಿ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

Leave a Comment

error: Content is protected !!