ಬೆಳ್ತಂಗಡಿ :99 ಕೋಟಿ ರೂ ವೆಚ್ಚದಲ್ಲಿ ಕಾಪುವಿನಲ್ಲಿ ಭವ್ಯವಾದ ಮಾರಿಕಾಂಬಾ ದೇವಸ್ಥಾನ ನಿರ್ಮಾಣವಾಗಲಿದ್ದು, ಇದರ ಬ್ರಹ್ಮಕಲಶಾದಿ ಕಾರ್ಯಕ್ರಮಗಳು ಫೆಬ್ರವರಿ 25ರಿಂದ ಮಾರ್ಚ್ 5ರವರೆಗೆ (2025) ನಡೆಯಲಿವೆ. ಈ ಸಂದರ್ಭ, ಕ್ಷೇತ್ರದ ಅಭಿವೃದ್ಧಿ ಹಾಗೂ ಲೋಕಕಲ್ಯಾಣಾರ್ಥವಾಗಿ ನವದುರ್ಗಾ ಲೇಖನ ಯಜ್ಞ ನಡೆಯಲಿದೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ಕಾಪುವಿನ ಶ್ರೀ ಮಾರಿಯಮ್ಮ ಕ್ಷೇತ್ರದ ಸಾನಿಧ್ಯವೃದ್ಧಿಗಾಗಿ ನವವಿಧದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಕಾಯಾಗ ಇದರಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಇದರ ಮೂಲಕ ನವದುರ್ಗಾ ಲೇಖನ, ಯಜ್ಞದಲ್ಲಿ ಸಂಕಲ್ಪಪೂರ್ವಕ ಭಾಗಿಯಾಗಲು ಸಾಧ್ಯವಿದೆ ಎಂದು ಯಜ್ಞ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.
ಅಕ್ಟೋಬರ್ 19 ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಲೇಖನ ಯಜ್ಞದಲ್ಲಿ ಭಾಗಿಯಾದವರು. ಅಕ್ಟೋಬರ್ 29 ರಂದು ನಡೆಯಲಿರುವ ವಾಗೀಶ್ವರಿ ಪೂಜೆಯಂದು ಪುಸ್ತಕ ಪಡೆದುಕೊಂಡು. 45 ದಿನಗಳ ಒಳಗಾಗಿ ಪುಸ್ತಕವನ್ನು ಸಾನಿಧ್ಯಕ್ಕೆ ತಲುಪಿಸಿ ಫೆಬ್ರವರಿ 4 2025 ರಂದು ನಡೆಯಲಿರುವ ನವಚಂಡಿಯಾಗದಲ್ಲಿ ಭಾಗವಹಿಸಬೇಕು ಎಂದು ಹೇಳಿದರು 99999 ಭಕ್ತರು ಸೇರಿ 9 ದಿನಕ್ಕೆ 9 ಬಾರಿ ನವ ದುರ್ಗೆಯರ ಹೆಸರು ಬರೆದು. ಕಾಪುವಿನ ಅಮ್ಮನ ಹೆಸರೊಂದಿಗೆ ಮುಕ್ತಾಯ ಮಾಡುವುದು. 9 ದಿನಗಳವರೆಗೆ ನವದುರ್ಗೆಯರ ಲೇಖನ ಬರೆದು. ಕೊನೆ ಪುಟದಲ್ಲಿ ತಮ್ಮ ಹೆಸರು ರಾಶಿ ನಕ್ಷತ್ರ ಮತ್ತು ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಕಾಪುವಿನ ಅಮ್ಮ ನನ್ನು ನೆನೆದು ಒಂಬತ್ತನೇ ದಿನಕ್ಕೆ ಮುಕ್ತಾಯಗೊಳಿಸುವುದು. ತಾವು ಬರೆದ ಪುಸ್ತಕ ಹಾಗೂ ತೆಗೆದಿಟ್ಟ 9 ಮುಷ್ಟಿ ಅಕ್ಕಿಯನ್ನು ಹಾಗೂ ಶೀಲಾ ಸೇವೆಯೊಂದಿಗೆ ಕಾಪುವಿನ ಅಮ್ಮನ ಸನ್ನಿಧಾನಕ್ಕೆ ಸಮರ್ಪಣೆ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಪುರುಷೋತ್ತಮ ಭಂಡಾರಿ ಅಡ್ಯಾರು. ಸಂಚಾಲಕರಾಗಿ ಕೃಷ್ಣಶೆಟ್ಟಿ ತಾರೆ ಮಾರ್. ಪ್ರದೀಪ್ ಆಳ್ವ ಕದ್ರಿ. ಸಂತೋಷ್ ಶೆಟ್ಟಿ. ಉಪಸ್ಥಿದ್ದರು. ಈ ಸಭೆಯಲ್ಲಿ ಸಹ ಸಂಚಾಲಕರಾದ ಪುಷ್ಪರಾಜ್ ಶೆಟ್ಟಿ, ಬೆಳ್ತಂಗಡಿ. ಸಂತೋಷ್ ಕುಮಾರ್ ಕಾಪಿನಡ್ಕ. ನವೀನ್ ಸಾಮಾನಿ. ಮೋಹನ್ ಬಂಗೇರ. ಮಹಿಳಾ ವಿಭಾಗ ಸಂಚಾಲಕರಾದ ಮಮತಾ ಶೆಟ್ಟಿ. ಪುಷ್ಪವತಿ ಆರ್ ಶೆಟ್ಟಿ ಸುಕನ್ಯಾ ಭಗೀರಥ. ಸುಜಾತ ಅಣ್ಣಿ ಪೂಜಾರಿ. ಶಾಂತ ಬಂಗೇರ. ಆಶಾ ಸತೀಶ್. ವಿಶಾಲ ಮೋಹನ್. ವಿದ್ಯಾ ಶ್ರೀನಿವಾಸ್
ಉಪಸ್ಥಿದ್ದರು. ಬೆಳ್ತಂಗಡಿ ತಾಲೂಕು ಸಮಿತಿ ಸಂಚಾಲಕರಾದ ಕಿರಣ್ ಕುಮಾರ್ ಸ್ವಾಗತಿಸಿ. ಸಹ ಸಂಚಾಲಕ ವಿಜಯ್ ಕುಮಾರ್ ಜೈನ್ ವಂದಿಸಿದರು