ಪೆರಾಡಿ ಬದ್ರಿಯಾ ಜುಮ್ಮಾ ಮಸೀದಿಗೊಳಪಟ್ಟ ಜಮಾಅತ್ ನ ನೂತನ ಖಾಝಿಯಾಗಿ ಜಿಲ್ಲಾ ಖಾಝಿಯಾಗಿರುವ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರು ಅ. 18ರಂದು ಜುಮ್ಮಾ ನಮಾಝ್ ಬಳಿಕ ಮಸೀದಿಯಲ್ಲಿ ನಡೆದ ಖಾಝಿ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಸಾಲ್ಮರ ಸಯ್ಯಿದ್ ಶರಫುದ್ದೀನ್ ತಂಙಳ್ ಅವರು ತ್ವಾಖಾ ಉಸ್ತಾದ್ ಅವರಿಗೆ ಖಾಝಿ ಪಟ್ಟ ನೀಡಿದರು.
ಮಸೀದಿ ಕಮಿಟಿ ಅಧ್ಯಕ್ಷ ಸಲಾಮ್ ಮರೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಅಕ್ರಮ್ ಅಲೀ ತಂಙಳ್ ಅಂಗರಕರ್ಯ, ಸಮದ್ ಹಾಜಿ,ಅದ್ದು ಹಾಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಜಲೀಲ್ ಪಿ.ಎ,ಅಝೀಝ್ ಫೈಝಿ ನಂದಾವರ, ಶಾಹುಲ್ ತಂಙಳ್, ರಶೀದ್ ಹಾಜಿ,ಸುಲೈಮಾನ್ ಸ ಅದಿ ಹೊಸ್ಮಾರ್,ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ, ಹಾಸ್ಕೊ ಅಬ್ದುಲ್ ರಹ್ಮಾನ್ ಹಾಜಿ,ಪೆರಾಡಿ ಸೊಸೈಟಿ ಬ್ಯಾಂಕ್ ಪ್ರಬಂಧಕ ಶೇಖ್ ಲತೀಫ್, ಅಖೀಝ್ ಮಾಲಿಕ್,ವಾಲ್ಪಾಡಿ ಮಸೀದಿಯ ಖತೀಬರಾದ ಅಬ್ಬಾಸ್ ಫೈಝಿ ದಿಡುಪೆ,ವಾಲ್ಪಾಡಿ ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ, ಅಶ್ರಫ್ ಮರೋಡಿ, ಎಂ.ಜಿ.ಮುಹಮ್ಮದ್ ತೋಡಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ವಕ್ಫ್ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಶೇಖ್ ಲತೀಫ್ ಹಾಗೂ ಅಝೀಝ್ ಬಿ.ಸಿ.ರೋಡ್ ಅವರನ್ನು ಸನ್ಮಾನಿಸಲಾಯಿತು.
ಮಸೀದಿಯ ಖತೀಬರಾದ ಸಫ್ವಾನ್ ಬಾಖವಿ ಮಾಪಾಲ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಅಝ್ಝಿನ್ ಅಬ್ದುರ್ರಹ್ಮಾನ್ ಫೈಝಿ ವಂದಿಸಿದರು. ಸಲಾಮ್ ಮರೋಡಿ ಖಾಝಿ ಅವರನ್ನು ಪರಿಚಯಿಸಿದರು. ಹಮೀದ್ ಸಾವ್ಯ ಸೇರಿದಂತೆ ಮಸೀದಿ ಕಮಿಟಿಯ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.