24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಿದ್ದರಾಮಯ್ಯ ಮಿಸ್ಟರ್ ಕ್ಲೀನ್ ಅಲ್ಲ, ಮಿಸ್ಟರ್ ಕರಪ್ಟ್, 100% ಹಗರಣ ಕಾಂಗ್ರೇಸ್ ಸರಕಾರದ ಸಾಧನೆ: ಬಿಜೆಪಿ ಅಭ್ಯರ್ಥಿಗೆ ಎರಡು ಸಾವಿರ ಮತದ ಅಂತರದ ಗೆಲುವು: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

ಬೆಳ್ತಂಗಡಿ: ಮೂಡ ಹಗರಣದ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯ ಮಿಷ್ಟರ್ ಕ್ಲೀನ್ ಅಲ್ಲ, ಮಿಷ್ಟರ್ ಕರಪ್ಟ್ ಎಂಬುದನ್ನು ದಾಖಲೆ ಸಮೇತ ಬಹಿರಂಗವಾಗಿದೆ. ಅವರು ಅವರಿಗವರೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದಾರೆ. ಅವರ ವಿಷಯ ಬಂದಾಗ ಲಾಯರ್ ಮಾತ್ರವಲ್ಲ ಜಡ್ಜ್ ಆಗುತ್ತಾರೆ. ಆದರೆ ದಾಖಲೆಗಳು ಮಿಷ್ಟರ್ ಕ್ಲೀನ್ ಎನ್ನುವುದು ಸ್ಪಷ್ಟ ಪಡಿಸುತ್ತಿದೆ. ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಉಜಿರೆ ಓಷಿಯನ್ ಪರ್ಲ್‌ನಲ್ಲಿ ಅ.18ರಂದು ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ರಾಜ್ಯ ಸರಕಾರ ಭ್ರಷ್ಟಾಚಾರ ಮತ್ತು ಮತಾಂದರನ್ನು ಓಲೈಸುವ ಸರಕಾರವಾಗಿದೆ. ಮೂಡಾ ಹಗರಣದಲ್ಲಿ ಕಾನೂನು ಕುಣಿಕೆ ಬಿಗಿಯಾಗುತ್ತಿದೆ ಎಂದು ಅರಿತು ಅಲ್ಲಿಂದ ಪಾರಾಗಲು ಯೋಚನೆ ಮಾಡಿ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿದ್ದ ಮೂಡಾ ಸೈಟ್ ಹಿಂದಿರುಗಿಸಲಾಗಿದೆ. ಸರಕಾರ ಜನಸ್ಪಂದನೆ ಇಲ್ಲದ ಸರಕಾರವಾಗಿದ್ದು, ಕೇವಲ ವಾಲ್ಮೀಕಿ ಮಾತ್ರವಲ್ಲ, ಎಲ್ಲ ನಿಗಮದಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಂದು ದ.ಕ.ಜಿಲ್ಲೆಯಲ್ಲೇ ೪೫ ಸಾವಿರ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 7000 ಲಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ. ಈ ಸರಕಾರ ಬಂದ ಮೇಲೆ ಬಡವರ ಅನ್ನಕ್ಕೂ ಕಲ್ಲು ಬಿದ್ದಿದೆ ಎಂದರು.

ನಮ್ಮ ಅಭ್ಯರ್ಥಿ 2000 ಮತಗಳ ಅಂತರದಿಂದ ಗೆಲುವು: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕಿಶೋರ್ ಕುಮಾರ್ ಅವರು 2೦೦೦ ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಸಂಘಟನೆ ಬಲ ಮತ್ತು ಗ್ರಾ.ಪಂ. ಸದಸ್ಯರ ಬಲದಿಂದ ವಿಶ್ವಾಸಪೂರ್ವಕವಾಗಿ ಹೇಳುತ್ತಿದ್ದೇನೆ. ಎರಡು ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಗ್ರಾ.ಪಂ. ಸದಸ್ಯರನ್ನು ಹೊಂದಿಲ್ಲ. ವಾಸ್ತವವಾಗಿ ಅವಿರೋಧ ಆಯ್ಕೆಗೆ ಅವಕಾಶ ಕೊಡಬೇಕಿತ್ತು. ಆದರೆ ಹಣ ಬಲ ಮತ್ತು ಸರಕಾರ ಬಲದಿಂದ ಏನಾದರು ಮಾಡಬಹುದೆಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ನಮ್ಮ ಸಂಘಟನೆ,ಶಾಸಕರು ಮತ್ತು ಸಂಸದರು, ಎಲ್ಲ ಗ್ರಾ.ಪಂ. ಸದಸ್ಯರು ಅವರ ಸವಾಲನ್ನು ಸ್ವೀಕರಿಸಿ ಒಟ್ಟು ಒಂದು ತಂಡವಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಭೆ ನಡೆಸುವ ಮೂಲಕ ನಮ್ಮ ಗೆಲುವನ್ನು ಖಾತ್ರಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ 2೦೦೦ ಮತಗಳ ಅಂತರದಲ್ಲಿ ಗೆಲ್ಲಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಹಗರಣ ಸಾಧನೆಯಾಗದು:ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾದವು. ನಿಮ್ಮ ಸಾಧನೆ ಏನೆಂದು ಕೇಳಿದರೆ ಯಾವ ಸಚಿವರು ಮಾತಾಡುತ್ತಿಲ್ಲ. ಹಗರಣ ಬಿಟ್ಟರೆ ಬೇರೆ ಯಾವ ಸಾಧನೆ ಅವರು ಮಾಡಿಲ್ಲ. ಹಗರಣ ಸಾಧನೆಯಾಗಲ್ಲ ಎಂದು ಟೀಕಿಸಿದರು.

ಬಿಜೆಪಿ ಮೇಲೆ ಶೇ.40 ಆರೋಪ ಹೊರಿಸಿದ್ದರು, ಈಗ ಗುತ್ತಿಗೆದಾರರಲ್ಲಿ ಕೇಳಿದರೆ ಶೇ.೧೦೦ ಹಗರಣ ನಡೆಯುತ್ತಿದೆ ಎಂಬುದು ಖಚಿತವಾಗುತ್ತಿದೆ. ಹಳೇ ಕಾಮಗಾರಿ ಬಿಲ್ ಪಾಸ್ ಆಗ್ತಿಲ್ಲ, ಹೊಸ ಕಾಮಗಾರಿ ಮಂಜೂರಾತಿಯಿಲ್ಲ, ಇರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು, ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಆ ಹಣವನ್ನು ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಸ್ಪಷ್ಟವಾಗುತ್ತದೆ ಎಂದರು.

ಸರಕಾರದ ವಿರುದ್ಧ ಹುಬ್ಬಳಿ ಸಲೋ ಹೋರಾಟ:ರಾಜ್ಯ ಸರಕಾರ ಕಮ್ಯೂನಲ್ ಮತ್ತು ಕ್ರಿಮಿನಲ್‌ಗಳಿಗೆ ಬೆಂಬಲಿಸುವ ಸರಕಾರವಾಗಿದೆ. 8 ವರ್ಷದ ಹಿಂದೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಮೇಲಿನ 2೦೦೦ ಹೆಚ್ಚು ಮೊಕದ್ದಮೆಗಳನ್ನು ವಾಪಾಸು ಪಡೆದ ಪರಿಣಾಮ ರಾಜ್ಯದಲ್ಲಿ 21 ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣವಾಯಿತು. ಈಗ ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣವನ್ನು ಕೂಡ ಹಿಂಪಡೆಯುವ ಕೆಟ್ಟ ಕೆಲಸವನ್ನು ಈ ಸರಕಾರ ಮಾಡಲು ಹೊರಟಿದೆ. ಈಗಾಗಲೆ ರಾಜ್ಯಾಧ್ಯಕ್ಷರ ಜತೆ ಚರ್ಚೆ ನಡೆಸಿದ್ದೇವೆ. ಸಂಪುಟದಲ್ಲಿನ ನಿರ್ಣಯ ವಾಪಾಸು ಪಡೆಯಬೇಕೆಂದು ಆಗ್ರಹಿಸಿ ಸರಕಾರದ ವಿರುದ್ಧ ಚುನಾವಣೆ ಮುಗಿದ ತಕ್ಷಣ ಹುಬ್ಬಳಿ ಚಲೋ ನಡೆಸಲಿದ್ದೇವೆ, ಜೊತೆಗೆ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಿದ್ದೇವೆ ಎಂದು ಹೇಳಿದರು.


ಚನ್ನಪಟ್ಟಣ ಅಭ್ಯರ್ಥಿ ವಿಚಾರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಪಕ್ಷದಿಂದ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಶಿಯಾಗಿದ್ದಾರೆ. ಹಾಗೆ ಸಿಗ್ಗಾಂನಲ್ಲಿ 16 ಕ್ಕೂ ಹೆಚ್ಚು ಹಾಗೂ ಸಂಡೂರಿನಲ್ಲಿ ೫ ಆಕಾಂಶಿಗಳಿದ್ದಾರೆ. ಇದರ ಏಕಪಕ್ಷೀಯ ನಿರ್ಣಯ ಮಾಡುವುದಿಲ್ಲ. ಕೇಂದ್ರ ಸಚಿವರು, ಜೆಡಿಎಸ್ ವರಿಷ್ಠ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ದೇವೇಗೌಡರೊಂದಿಗೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಪಕ್ಷದ ಪಾರ್ಲಿಮೆಂಟ್‌ನಲ್ಲಿ ತೆಗೆದುಕೊಳ್ಳಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೆಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಪ್ರಧಾನ ಕಾರ್ಯದರ್ಶಿ ಯತೀಶ್, ಪ್ರೇಮಾನಂದ ಶೆಟ್ಟಿ, ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಜಯಾನಂದ ಗೌಡ, ಸೀತರಾಮ್ ಬೆಳಾಲು ಉಪಸ್ಥಿತರಿದ್ದರು.

Related posts

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲು: ಬೆಳ್ತಂಗಡಿಯ ಮೂವರು ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿಯಿಂದ ಕಾರಣ ಕೇಳಿ ನೋಟೀಸ್

Suddi Udaya

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 11 ಜೋಡಿಗಳಿಗೆ ಸಾಮೂಹಿಕ ವಿವಾಹ ನಿಶ್ವಿತಾರ್ಥ,

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ನ.14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಂದ ಶ್ರೀ ಕ್ಷೇ.ಧ.ಗ್ರಾ.ಯೋ. ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವಿತೀಯ

Suddi Udaya

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya
error: Content is protected !!