25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಗುರುವಾಯನಕೆರೆ ಎಕ್ಸೆಲ್ ಕಾಲೇಜು ಆದರ್ಶ ವಿದ್ಯಾಲಯ: ಡಾ. ಸುಬ್ರಹ್ಮಣ್ಯ ಭಟ್

ಗುರುವಾಯನಕೆರೆ: ಅತ್ಯುತ್ತಮ ಫಲಿತಾಂಶ, ಶಿಸ್ತು ಬದ್ಧ ಕಲಿಕೆ, ಆಹ್ಲಾದಕರ ವಾತಾವರಣ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಒಂದು ಆದರ್ಶ ವಿದ್ಯಾಲಯವನ್ನಾಗಿ ರೂಪಿಸಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.

ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ತನ್ನ ವಿದ್ಯಾರ್ಥಿಯಾಗಿದ್ದುದನ್ನು ಸ್ಮರಿಸಿದ ಅವರು, ಈ ಬೃಹತ್ ವಿದ್ಯಾಲಯದ ಬಗೆಗೆ ತನಗೆ ವಿಶೇಷ ಅಭಿಮಾನವಿದೆ ಎಂದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿಗೆ ಇತ್ತೀಚಿಗೆ ಭೇಟಿ ನೀಡಿದ ಅವರು, ಕಾಲೇಜು ವತಿಯಿಂದ ಮಾಡಲಾದ ಗೌರವಾರ್ಪಣೆಯನ್ನು ಸ್ವೀಕರಿಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಆಡಳಿತ ಮಂಡಳಿಯ ಸಹನಾ ಜೈನ್, ಶೈಕ್ಷಣಿಕ ಸಂಯೋಜಕರಾದ ನಿಶಾ ಪೂಜಾರಿ ಉಪಸ್ಥಿತರಿದ್ದರು.

Related posts

ಬಳ್ಳಮಂಜ ಬಸದಿಯಲ್ಲಿ 37ನೇ ವರ್ಷದ ವಾರ್ಷಿಕೋತ್ಸವ: ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ: ಪ.ಜಾತಿ.ಪ.ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ. ಅಧ್ಯಕ್ಷತೆಯಲ್ಲಿ ಕುಂದುಕೊರತೆ ಮತ್ತು ಪ್ರಗತಿ ಪರಿಶೀಲನಾ ಸಭೆ

Suddi Udaya

ಪುಂಜಾಲಕಟ್ಟೆ ಸ.ಪ.ಪೂ. ಕಾಲೇಜಿನ ಹಳೆ ವಿದ್ಯಾರ್ಥಿಗಳಿಂದ ನಿವೃತ್ತ ಯೋಧ ವಿಕ್ರಂ ಜೆ.ಎನ್ ರಿಗೆ ಸನ್ಮಾನ

Suddi Udaya

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕೊಡಿಮರ ಸಮರ್ಪಣೆ

Suddi Udaya

ವಿದ್ವತ್ ಭರವಸೆ: ಪ್ರತಿಭಾನ್ವಿತರಿಗೆ ಉಚಿತ ಶಿಕ್ಷಣ

Suddi Udaya
error: Content is protected !!