ವೇಣೂರಿನ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ನಿರ್ಮಲ ಚಿತ್ತ ಲಹರಿ’ ಕವನ ಸಂಕಲನ ಬಿಡುಗಡೆ

Suddi Udaya

ವೇಣೂರಿನ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.19 ರಂದು ಹತ್ತನೇ ತರಗತಿಯ ವಿದ್ಯಾರ್ಥಿ ನಿರಂಜನ ಶಿವಾನಂದ ಅಗಸಿಮನಿಯವರು ರಚಿಸಿದ ಕವನಗಳ ಕವನ ಸಂಕಲನ  ‘ನಿರ್ಮಲ ಚಿತ್ತ ಲಹರಿ’ ಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು.

ಕವನ ಸಂಕಲನದ ಪರಿಚಯವನ್ನು ಸರಕಾರಿ ಪದವಿಪೂರ್ವ ಕಾಲೇಜು, ಕೋಣಾಲಿನ ಉಪನ್ಯಾಸಕಿ ಶ್ರೀಮತಿ ಸುಪ್ರೀತಾ ಚರಣ್  ರವರು ಮಾಡಿದ್ದು, ಶಾಲಾ ಸಂಚಾಲಕಿ ಶ್ರೀಮತಿ ಶೀಲಾ ಎಸ್ ಹೆಗ್ಡೆಯವರು ಶುಭಾಂಸನೆಗೈದರು. ಸಂದರ್ಭದಲ್ಲಿ ಭಾರತೀಯ ಭೂಸೇನೆಗೆ  ಅಗ್ನಿವೀರ್ ಯೋಜನೆಯಲ್ಲಿ ಸೇರ್ಪಡೆಯಾದ ಶಾಲೆಯ ಹಳೆ ವಿದ್ಯಾರ್ಥಿ ಯಂ.ಜಿ. ಮಣಿಕಂಠರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಪ್ರಬಂಧಕರಾದ ಕೆ. ಶಿವರಾಮ ಹೆಗ್ಡೆಯವರು ವಹಿಸಿದ್ದು,
ಶಾಲಾ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ರಾಜೇಶ್ ಮೂಡುಕೋಡಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಪ್ರಮುಖರು ಭಾಗವಹಿಸಿದ್ದರು.

Leave a Comment

error: Content is protected !!