ಉಜಿರೆ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಉಜಿರೆ ವಲಯ ಹಾಗೂ ಕೇಸರಿ ಗೆಳೆಯರ ಬಳಗ ಕುಂಜರ್ಪ ಇದರ ಆಶ್ರಯದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ರವರ ನೇತೃತ್ವದಲ್ಲಿ ಅ.20ರಂದು ಕುಂಜರ್ಪದ ಕ್ರೀಡಾ ಗದ್ದೆಯಲ್ಲಿ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬುಲು” ಸೌಜನ್ಯ ಟ್ರೋಫಿ -2024 , ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮುಕ್ತ ಹಗ್ಗ ಜಗ್ಗಾಟ ಕಾರ್ಯಕ್ರಮ ನಡೆಯಿತು.
ಡಾ। ಎಂ. ಗುರುಪ್ರಸಾದ್ ರಾವ್ ಮತ್ತು ಶ್ರೀಮತಿ ಡಾ| ವಿದ್ಯಾವತಿ ಜಿ. ರಾವ್ ಕುಂಜರ್ಪ ಇವರು ದೀಪ ಪ್ರಜ್ವಲನೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಬೆಳ್ತಂಗಡಿ ತಾಲೂಕು ರಾ.ಹಿಂ.ಜಾ.ವೇ. ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು ಅಧ್ಯಕ್ಷತೆಯನ್ನು ವಹಿಸಿದರು.
ವೇದಿಕೆಯಲ್ಲಿ ಸೋಮಪ್ಪ ಪೂಜಾರಿ ಬಾರೆದಡಿ, ಶ್ರೀಮತಿ ರತ್ನ ಅಣ್ಣಿ ಪೂಜಾರಿ, ಶ್ರೀಮತಿ ಚೇತನಾ ರಮಾನಂದ ಕಲ್ಲೆ, ಶ್ರೀ ಸಾಯಿ ಮೆಡಿಕಲ್ ಉಜಿರೆ, ಕೃಷ್ಣಪ್ಪ ಅಂಚನ್ ಕುಂಜರ್ಪ, ಸಂಜೀವ ಶೆಟ್ಟಿ ಕುಂಜರ್ಪ, ಶ್ರೀಮತಿ ಗಿರಿಜಾ ಆಚಾರ್ಯ ಕುಂಜರ್ಪ, ಶ್ರೀಮತಿ ಲಕ್ಷ್ಮೀ ಮಹಾಬಲ ಪೂಜಾರಿ ಬಾರೆದಡಿ, ಲಕ್ಷ್ಮಣ್ ಸುವರ್ಣ ಕುಂಜರ್ಪ, ಅಣ್ಣು ನಾಯ್ಕ ಕಲ್ಲೆ, ಬಾಬು ಪೆರ್ಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕೋಣ ಓಡಿಸುವ ಮೂಲಕ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟನೆಗೊಳಿಸಲಾಯಿತು. ಬೆಳಗ್ಗೆ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಿತು. ರಾತ್ರಿ ಪುರುಷರ ವಿಭಾಗದ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟ ನಡೆದಿದ್ದು, ಸುಮಾರು 40 ತಂಡಗಳು ಭಾಗವಹಿಸಿದ್ದವು.