25.7 C
ಪುತ್ತೂರು, ಬೆಳ್ತಂಗಡಿ
May 17, 2025
ಆಯ್ಕೆತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಬೆಂಗಳೂರು ಕಾವ್ಯಶ್ರೀ ಸೇವಾ ಟ್ರಸ್ಟ್” ವತಿಯಿಂದ ಬಜಿರೆ ಶಾಲೆಯ ಇಬ್ಬರು ಅತಿಥಿ ಶಿಕ್ಷಕಿಯರಿಗೆ ಅತ್ಯುತ್ತಮ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: “ಬೆಂಗಳೂರು ಕಾವ್ಯಶ್ರೀ ಸೇವಾ ಟ್ರಸ್ಟ್” ವತಿಯಿಂದ ರಾಜ್ಯದ ಅತ್ಯುತ್ತಮ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿಗೆ ಬಜಿರೆ ಶಾಲೆಯ ಇಬ್ಬರು ಶಿಕ್ಷಕಿಯರು ಆಯ್ಕೆಯಾಗಿದ್ದು ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಬೆಳ್ತಂಗಡಿ ತಾಲೂಕಿನ ಪಿ. ಎಮ್. ಶ್ರೀ. ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಜಿರೆಯಲ್ಲಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಾಲತಿ ದಿನೇಶ್ ಕುಮಾರ್ ಮತ್ತು ಜೆನಿಫರ್ ಮಸ್ಕರೇನ್ಹಸ್ ಸರಕಾರಿ ಪ್ರಾಥಮಿಕ ಅತಿಥಿ ಶಿಕ್ಷಕರಾಗಿ ನೇಮಕಗೊಂಡು, ಶಾಲೆಯಲ್ಲಿ ಉತ್ತಮ ಶಿಕ್ಷಕರಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ, ಪ್ರಾಥಮಿಕ ಅತಿಥಿ ಶಿಕ್ಷಕರ ರಾಜ್ಯ ಸಮಿತಿಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಉತ್ತಮ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ರಾಜ್ಯದ ಅತ್ಯುತ್ತಮ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Related posts

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

Suddi Udaya

ಕೊಕ್ಕಡ: ಸ್ವಚ್ಛತೆಯೇ ಸೇವೆ, ಶ್ರಮದಾನ, ಸಾಧಕರಿಗೆ ಸನ್ಮಾನ

Suddi Udaya

ಬಳಂಜ: ಅಟ್ಲಾಜೆ ದ.ಕ ಜಿ.ಪಂ. ಕಿ.ಪ್ರಾ ಶಾಲಾ ಪ್ರಾರಂಭೋತ್ಸವ ಸಂಭ್ರಮ: ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರುರವರಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ರೆಖ್ಯ ಬಿಜೆಪಿ ಕಾರ್ಯಕರ್ತರಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಡಿ.21 :ಕೊಡಿಂಬಾಡಿಯಲ್ಲಿ ಲಲಿತ ಮೆಡಿಕಲ್ ಸ್ಟೋರ್‍ಸ್ ಶುಭಾರಂಭ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ: ಉಜಿರೆ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!